ಯಾದಗಿರಿ: ಗಾಳಿಸಹಿತ ಸುರಿದ ಭಾರಿ ಮಳೆಗೆ ಹಲವು ಮನೆಯ ಗೋಡೆ, ಛಾವಣಿ ಕುಸಿದು ಹಲವರಿಗೆ ಗಂಭೀರ ಗಾಯಗಳಾಗಿದೆ. ಅಲ್ಲಿಪುರ ಗ್ರಾಮದ ಭಾಗಮ್ಮ ಎಂಬಾಕೆ ಮಕ್ಕಳೊಂದಿಗೆ ಮಲಗಿದ್ದ ವೇಳೆ ಗಾಳಿಗೆ ಶೀಟ್ಗಳು ಹಾರಿದ್ದು, ಕಲ್ಲುಗಳು ಮಲಗಿದ್ದವರ ಮೇಲೆ ಬಿದ್ದಿವೆ.
ಈ ಘಟನೆಯಲ್ಲಿ ಮಕ್ಕಳಾದ 15 ವರ್ಷದ ಸಾಬಣ್ಣ, 8 ವರ್ಷದ ಕರೆಪ್ಪ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಗ್ರಾಮದ ಬಾಸ್ಕರ, ದೇವಿಂದ್ರಮ್ಮ, ಸವಿತಾಬಾಯಿ ಎನ್ನುವರ ಮನೆಯ ಛಾವಣಿ ಕುಸಿದಿದೆ.
ಮೋಟ್ನಳ್ಳಿ ಗ್ರಾಮದ ಸಾಬಣ್ಣ ನಾಚವಾರ ಎನ್ನುವವರ ಮನೆ ಮೇಲೆ ಬೇವಿನ ಮರ ಉರುಳಿದ್ದು, ಮನೆಗೆ ಹಾನಿಯಾಗಿದೆ. ಹೊಲಗಳಿಗೆ ನೀರು ನುಗ್ಗಿ ಭತ್ತ, ಹತ್ತಿ, ಶೇಂಗಾ ಬೆಳೆಗಳು ನಾಶವಾಗಿವೆ.
ಇದನ್ನೂ ಓದಿ: ಮನೆ ಕುಸಿದು ದುರಂತ: ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದ ಜಿಲ್ಲಾಡಳಿತ