ಸುರಪುರ(ಯಾದಗಿರಿ): ತಾಲೂಕಿನ ಯಾಳಗಿ ಸದ್ಗುರು ಮಠದ ವತಿಯಿಂದ ಧಾರವಾಡ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿನ 11 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಲಾಕ್ಡೌನ್ನಿಂದಾಗಿ ಹಲವಾರು ಬಡ ಕುಟುಂಬಗಳ ಜೀವನ ಕಷ್ಟಕರವಾಗಿದ್ದು, ಅಂತಹ ಕುಟುಂಬಗಳ ನೆರವಿಗೆ ಸದ್ಗುರು ಸಂಸ್ಥಾನ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸದ್ಗುರು ಮಠದ ರಾಮಪ್ಪಯ್ಯ ಸ್ವಾಮೀಜಿ, ಭಕ್ತರು ಮಠಕ್ಕೆ ಸಾಕಷ್ಟು ದಾನ-ಧರ್ಮ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ನಿಲ್ಲುವುದು ಎಲ್ಲಾ ಮಠಗಳ ಆದ್ಯ ಕರ್ತವ್ಯವಾಗಿದೆ.
ಈಗಾಗಲೇ 11 ಸಾವಿರ ಆಹಾರ ಕಿಟ್ಗಳನ್ನ ವಿತರಣೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಆಹಾರ ಧಾನ್ಯಗಳನ್ನ ವಿತರಿಸಲಾಗುತ್ತದೆ ಎಂದಿದ್ದಾರೆ.