ETV Bharat / state

ಸುರಪುರ ತಾಲೂಕಿನಾದ್ಯಂತ ನೆಲಕಚ್ಚಿದ ಭತ್ತದ ಬೆಳೆ: ಸಂಕಷ್ಟದಲ್ಲಿ ಅನ್ನದಾತ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನೂರಾರು ಎಕರೆ ಭತ್ತ ನೀರು ಪಾಲಾಗಿದೆ.

Rain effect Paddy crop destruction in Surapur taluk
ನೆಲಕಚ್ಚಿದ ಭತ್ತದ ಬೆಳೆ
author img

By

Published : Oct 16, 2020, 10:09 AM IST

ಸುರಪುರ: ತಾಲೂಕಿನಾದ್ಯಂತ ಸಾವಿರಾರು ಎಕರೆಯಲ್ಲಿ ಬೆಳದಿದ್ದ ಭತ್ತ ಮಳೆ, ಗಾಳಿಯಿಂದಾಗಿ ಸಂಪೂರ್ಣ ನಾಶವಾಗಿದೆ.

ಸತ್ಯಂಪೇಟೆ, ಕೃಷ್ಣಾಪುರ, ವಾಗಣಗೇರಾ, ತಳವಾರಗೇರಾ, ಕನ್ನೆಳ್ಳಿ ಮಂಗಳೂರು, ಹುಣಸಗಿ, ಕಾಮನಟಿಗಿ, ಕಕ್ಕೇರಾ, ಹೆಬ್ಬಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ.

ನೆಲಕಚ್ಚಿದ ಭತ್ತದ ಬೆಳೆ, ರೈತರ ಬವಣೆ

ಸತ್ಯಂಪೇಟೆ ಗ್ರಾಮದ ರೈತ ಶರಣಪ್ಪ ಯಾಳಗಿ ಮಾತನಾಡಿ, 'ನಮ್ಮ ಹತ್ತು ಎಕರೆ ಜಮೀನಿನಲ್ಲಿ ಬೆಳೆದ ಭತ್ತದ ತೆನೆಗಳು ಬಿದ್ದಿವೆ. ಇಡೀ ಬೆಳೆ ನೀರಲ್ಲಿ ನೆನೆಯುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನಮಗೆ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ರೈತರು ತೀವ್ರ ತೊಂದರೆಗೆ ಸಿಲುಕಲಿದ್ದಾರೆ' ಎಂದರು.

ಬೆಳೆ ಹಾನಿಯಾದ ಜಮೀನುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಭೇಟಿ ನೀಡಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.