ETV Bharat / state

ಕಾರು ಚಾಲಕ-ಪೊಲೀಸರ ನಡುವೆ ವಾಗ್ವಾದ: ದಂಡ ವಿಧಿಸಿ ಬಿಸಿ ಮುಟ್ಟಿಸಿದ ಆರಕ್ಷಕ - Yadgiri latest news

ವಾಹನ ಸವಾರನೋರ್ವ ಕೋವಿಡ್​ ಮತ್ತು ಟ್ರಾಫಿಕ್​ ನಿಯಮ ಉಲ್ಲಂಘಿಸಿದ್ದಲ್ಲದೆ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಆತನಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಕಾರು ಚಾಲಕ-ಪೊಲೀಸರ ನಡುವೆ ವಾಗ್ವಾದ
ಕಾರು ಚಾಲಕ-ಪೊಲೀಸರ ನಡುವೆ ವಾಗ್ವಾದ
author img

By

Published : Oct 11, 2020, 7:57 AM IST

ಯಾದಗಿರಿ: ಸರ್ಕಾರ ಈಗಾಗಲೇ ಕೊರೊನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ವಾಹನ ಸವಾರರು ಮಾತ್ರ ಸಾರಿಗೆ ಹಾಗೂ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ವಾಹನ ಸಂಚರಿಸುತ್ತಿದ್ದಾರೆ.

ನಗರದ ಗಾಂಧಿ ವೃತ್ತದ ಬಳಿ ಸೀಟ್​ ಬೆಲ್ಟ್ ಹಾಗೂ ಮಾಸ್ಕ್ ಧರಿಸದ ವಾಹನ ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ ಆತ ವಾಗ್ವಾದಕ್ಕೆ ಇಳಿದಿದ್ದಾನೆ. ಆಗ ಪೊಲೀಸರು ದಂಡ ಜಡಿದು ಬುದ್ಧಿ ಕಲಿಸಿದ್ದಾರೆ. ದಂಡದ ರಶೀದಿ ಬುಕ್ ತೆರೆಯುತ್ತಿದ್ದಂತೆ ಕಾರು ಮಾಲೀಕನು ಯುವಕರೊಂದಿಗೆ ಸೇರಿ ಗಲಾಟೆಗೆ ಮುಂದಾಗಿದ್ದ.

ಚಾಲಕ ಸೀಟ್​ ಬೆಲ್ಟ್​ ಹಾಕದ್ದಕ್ಕೆ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿ ರಶೀದಿ ಕೈಯಲ್ಲಿಟ್ಟು ಬಿಸಿ ಮುಟ್ಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.