ಯಾದಗಿರಿ : 'ನಮ್ಮನ್ನ ಮನೆಗೆ ಹೋಗಲು ಬಿಡಿ' ಎಂದು ಕ್ವಾರಂಟೈನ್ ಕೇಂದ್ರದಲ್ಲಿದ್ದ ಕಾರ್ಮಿಕರು ಕೇಂದ್ರದ ಬೀಗ ಮುರಿದು ಹೊರ ಬಂದಿದ್ದಾರೆ.
ಕ್ವಾರಂಟೈನ್ ಅವಧಿ ಮುಗಿದರೂ ಕೂಡ ನಮ್ಮನ್ನು ಮನೆಗೆ ಕಳುಹಿಸುತ್ತಿಲ್ಲ ಎಂದು ಆರೋಲಿಸಿರುವ ಕಾರ್ಮಿಕರು, ಕೇಂದ್ರದಿಂದ ಹೊರ ಬಂದು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ.
ಯಾದಗಿರಿ ತಾಲೂಕಿನ ಶೆಟ್ಗಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ಜರುಗಿದೆ. ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ 206 ವಲಸೆ ಕಾರ್ಮಿಕರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕ್ವಾರಂಟೈನಿಗರನ್ನು ಪೋಲಿಸರು ತಡೆದು ಸಮಾಧಾನ ಪಡಿಸಿದ್ದಾರೆ.