ETV Bharat / state

ಸುರಪುರ: ಭೂ ಸುಧಾರಣಾ,ಎಪಿಎಂಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ... - peasents protest at surapura

ರೈತರು, ಕಾರ್ಮಿಕರು, ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ತಾಲೂಕಿನ ತಹಶೀಲ್ದಾರ್​ ಕಚೇರಿ ಎದುರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

peasents protest against govt at surapura
ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಗೆ ಮನವಿ
author img

By

Published : Sep 24, 2020, 7:18 PM IST

ಸುರಪುರ: ಭೂ ಸುಧಾರಣಾ ಕಾಯಿದೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ತಾಲೂಕಿನ ತಹಶೀಲ್ದಾರ್​ ಕಚೇರಿ ಎದುರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ರೈತರು, ಕಾರ್ಮಿಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ವಲಯಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಭೂ ಸುಧಾರಣಾ,ಎಪಿಎಂಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಸರ್ಕಾರ, ಭೂ ಸುಧಾರಣಾ ಕಾಯಿದೆ ಮತ್ತು ಎಪಿಎಂಸಿ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ರೈತರ ನಿರ್ನಾಮ ಮಾಡಲು ಮುಂದಾಗಿದ್ದು, ಅದರಂತೆ ಕಾರ್ಮಿಕರ ಏಳಿಗೆಯತ್ತಲೂ ನಿರ್ಲಕ್ಷ್ಯ ತೋರಿದೆ ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿ ಪಾಲು ಮಾಡಲು ಅಂಗನವಾಡಿ ಕೇಂದ್ರಗಳನ್ನು ಶಾಲೆಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದು ಖಂಡನೀಯವಾಗಿದೆ ಎಂದರು.

ನಂತರ ಪ್ರಧಾನ ಮಂತ್ರಿಯವರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಬಸಮ್ಮ ಆಲ್ಹಾಳ, ರೈತ ಸಂಘಟನೆಯ ಮುಖಂಡ ಯಲ್ಲಪ್ಪ ಚಿನ್ನಾಕಾರ, ದಲಿತಪರ ಹೋರಾಟಗಾರ ಪ್ರಕಾಶ್ ಆಲ್ಹಾಳ, ನಸೀಮಾ ಮುದನೂರು ರಾಧಾ ಬಾಯಿ ಲಕ್ಷ್ಮೀಪುರ ಸೇರಿದಂತೆ ಅನೇಕರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.