ಯಾದಗಿರಿ: ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಗೆ ಪಿಡಿಒ ಗೈರಾದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಯಾದಗಿರಿ ತಾಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ನೀಲಮ್ಮ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪಿಡಿಒ ಭಾನುಬೇಗಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 2 ಗಂಟೆಯಾದರೂ ಸಭೆಗೆ ಪಿಡಿಒ ಆಗಮಿಸಿರಲಿಲ್ಲ. ರೊಚ್ಚಿಗೆದ್ದ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷರು ಸೇರಿ 25 ಸದಸ್ಯರು ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಅಭಿವೃದ್ಧಿ ಕುಂಟಿತ ವಿಚಾರವಾಗಿ ಪಿಡಿಒ ಬೇಗಂ ನಿರ್ಲಕ್ಷ್ಯವೇ ಕಾರಣ, ಕಾಮಗಾರಿಗಳು ವಿಳಂಬಕ್ಕೆ ಪಿಡಿಒ ನಿರ್ಧಾರವೇ ಕಾರಣ ಎಂದು ಆರೋಪಿಸಿದರು. ಕೂಡಲೇ ಪಿಡಿಒ ಅವರನ್ನು ಅಮಾನತು ಮಾಡಿ ಎಂದು ಆಗ್ರಹಿಸಿದ್ದಾರೆ.