ETV Bharat / state

ಯಾದಗಿರಿಗೆ ಮೆಡಿಕಲ್ ಕಾಲೇಜು ಬೇಡ ಎಂದ ಸಿಎಂ ವಿರುದ್ಧ ಶಾಸಕ ಮುದ್ನಾಳ್​ ಕಿಡಿ - undefined

ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್​ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ವಿರುದ್ಧ ಶಾಸಕ ಮುದ್ನಾಳ್ ವಾಗ್ದಾಳಿ
author img

By

Published : Jun 26, 2019, 12:14 PM IST

ಯಾದಗಿರಿ: ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್​ ಕಿಡಿಕಾರಿದ್ದಾರೆ.

ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡ ಎಂಬ ಹೇಳಿಕೆ ನೀಡಿದ್ದರು ಎನ್ನಲಾಗ್ತಿದೆ. ಇದರಿಂದ ಸಿಡಿಮಿಡಿಗೊಂಡಿರುವ ಶಾಸಕರು, ನಗರದ ಎನ್​ವಿಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸಮರ್ಥನೆ ನೀಡಬೇಕು. ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಮೆಡಿಕಲ್ ಓದಬಾರದೇ? ನಾವೇನು ಅನಕ್ಷರಸ್ಥರೇ? ಎಂದು‌ ಮುದ್ನಾಳ್​ ಪ್ರಶ್ನಿಸಿದ್ದಾರೆ.

ಸಿಎಂ ವಿರುದ್ಧ ಶಾಸಕ ಮುದ್ನಾಳ್ ವಾಗ್ದಾಳಿ

ಈಗಾಗಲೇ 30 ಎಕರೆ ಜಾಗವನ್ನು ಮೀಸಲಿಟ್ಟು, 600 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಜಿಲ್ಲಾಡಳಿತ ತುದಿಗಾಲದಲ್ಲಿ ನಿಂತಿದೆ. ಆದರೆ ಸಿಎಂ ಇದನ್ನು ಬೇಡ ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಮನಸ್ಸಿಗೆ ತಿಳಿದಂತೆ ನಿರ್ಧಾರ ತೆಗೆದುಕೊಳ್ಳುವ ಇಂತಹ ಮುಖ್ಯಮಂತ್ರಿಯನ್ನು ಈವರೆಗೂ ನೋಡೇ ಇಲ್ಲವೆಂದು ಶಾಸಕ ಮುದ್ನಾಳ್​ ಹರಿಹಾಯ್ದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ಸ್ಥಳೀಯ ವಿದ್ಯಾರ್ಥಿಗಳೂ ಸಹ ವೈದ್ಯಕೀಯ ಕೋರ್ಸ್​ ಕಲಿಯಲು ಅವಕಾಶ ಸಿಗುತ್ತದೆ. ರೋಗಿಗಳು ಚಿಕಿತ್ಸೆಗೆಂದು ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಶಾಸಕ ವೆಂಕಟರೆಡ್ಡಿ ಹೇಳಿದರು.

Intro:ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಸಿ ಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿಯ ಎನ ವಿ ಎಮ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಾಡಿನ ದೊರೆ ಕುಮಾರಸ್ವಾಮಿ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಯಾದಗಿರಿಯ ಚಂಡ್ರಕಿ ಗ್ರಾಮದಲ್ಲಿ ಸಿ ಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಜಿಲ್ಲೆಗೆ ಮೇಡಿಕಲ್ ಕಾಲೇಜು ಬೇಡ ಎಂಬ ಹೇಳಿಕೆಯನ್ನು ನೀಡಿದ ಬೆನ್ನಲೆ ಶಾಸಕ ವೆಂಕಟರೆಡ್ಡಿ ಸಿಡಿಮಿಡಿಗೊಂಡಿದ್ದಾರೆ.

ಜಿಲ್ಲೆಗೆ ಮೇಡಿಕಲ್ ಕಾಲೇಜು ಬೇಡ ಎಂಬ ಸಿ ಎಂ ಹೇಳಿಕೆಯನ್ನು ವಿರೋಧಿಸಿದ ಶಾಸಕ ವೆಂಕಟರೆಡ್ಡಿ ವೈದ್ಯಕೀಯ ಕಾಲೇಜು ಬೇಡ ಎಂದ ಹೇಳಿಕೆಗೆ ಸಿ ಎಮ ಕುಮಾರಸ್ವಾಮಿ ಅರ್ಥ ನೀಡಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಮೇಡಿಕಲ್ ಓದಬಾರದೆ , ನಾವೇನು ಅನಕ್ಷರಸ್ಥರೆ ಎಂದು‌ ಶಾಸಕ ವೆಂಕಟರೆಡ್ಡಿ ಖಾರವಾಗಿ ಸಿ ಎಂ ಕುಮಾರ ಸ್ವಾಮಿಗೆ ಪ್ರಶ್ನಿಸಿದ್ದಾರೆ.

ನನ್ನ ಜೀವಮಾನದಲ್ಲಿ ಮನಸ್ಸಿಗೆ ಬಂದ ಹಾಗೆ ‌ನಿರ್ಧಾರ ತೆಗೆದುಕೊಳ್ಳುವ ಮುಖ್ಯಮಂತ್ರಿಯನ್ನು ನಾನು ಎಂದು ನೋಡೆಯಿಲ್ಲ ಎಂದು ಪರೋಕ್ಷವಾಗಿ ಸಿ ಎಂ ಕುಮಾರಸ್ವಾಮಿಯನ್ನು ಹುಚ್ಚ ದೊರೆ ಮಹ್ಮದ ಬಿನ್ ತುಘಲಕಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೋಳಿಸಿದ್ದಾರೆ.

Body:ಹೀಗಾಗಲೆ 30 ಎಕ್ರೆ 38 ಗುಂಟಿಯನ್ನು ಜಿಲ್ಲಾಡಳಿತ ವೈದ್ಯಕೀಯ ಕಾಲೇಜಿಗೆ ಮೀಸಲಿಡಲಾಗಿದೆ. 600 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜಿಗೆ ಸ್ಥಾಪನೆಗೆ ಜಿಲ್ಲಾಡಳಿತ ತುದಿಗಾಲದಲ್ಲಿ ನಿಂತಿದೆ. ಅದ್ರೆ ಸಿ ಎಂ ಕುಮಾರಸ್ವಾಮಿ ವೈದ್ಯಕೀಯ ಕಾಲೇಜು ಬೇಡ ಅಂತ ಹೇಳುವುದು ಎಷ್ಟರ್ ಮಟ್ಟಿಗೆ ಸರಿ ಎಂದು ಸಿ ಎಂ‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Conclusion:ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಲಿಯಲು ಅವಕಾಶ ಸಿಗುತ್ತದೆ .ಸ್ಥಳೀಯ ರೋಗಿಗಳಿಗೆ ಅವಕಾಶ ಸಿಗುವುದರ ಜೊತೆಗೆ ಜಿಲ್ಲೆಯು ಆರ್ಥಿಕ ವ್ಯವಸ್ಥೆಯು ಬಿಲಿಷ್ಟವಾಗುತ್ತದೆ. ರೋಗಿಗಳನ್ನು ಚಿಕಿತ್ಸೆಗೆಂದು ಗುಲಬರ್ಗಾ ಹಾಗೂ ರಾಯಚೂರ ಜಿಲ್ಲೆಗಲಿಗೆ ಹೋಗುವುದು ತಪ್ಪತ್ತದೆ ಎಂದು ಶಾಸಕ ವೆಂಕಟರೆಡ್ಡಿ ಪರೋಕ್ಷವಾಗಿ ಸಿ ಎಂ ಕುಮಾರಸ್ವಾಮಿಗೆ ಮನವರಿಕೆ ಮಾಡಿದರು‌ .

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.