ETV Bharat / state

6 ತಿಂಗಳೊಳಗೆ ಸಿಎಂ ಖುರ್ಚಿಯಿಂದ ಬಿಎಸ್​ವೈ ಕೆಳಗಿಳಿಯೋದು ಖಚಿತ: ಶರಣಬಸಪ್ಪಗೌಡ ದರ್ಶನಾಪುರ

ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಸಚಿವರ ಎಲ್ಲಾ ಇಲಾಖೆಯ ಕೆಲಸದಲ್ಲಿ, ಹಣಕಾಸಿನ ವ್ಯವಹಾರದಲ್ಲಿ ಕೂಡ ಸಿಎಂ ಅವರ ಮಗ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇದರಿಂದ ಬಹುತೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಸಿಎಂ ಬದಲು ಅವರ ಮಗ ಆಡಳಿತದಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.

Sharanabasappa gowda darshanapur
ಶರಣಬಸಪ್ಪಗೌಡ ದರ್ಶನಾಪುರ
author img

By

Published : Sep 15, 2020, 8:17 PM IST

ಯಾದಗಿರಿ: ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಎಸ್​ವೈ ಬೆಂಬಲಿಗ ಶಾಸಕರು ಸಿಎಂ ಆಗಿ ಬಿಎಸ್​ವೈ ಅವರು ತಮ್ಮ‌ ಪೂರ್ಣ ಅವಧಿ ಪೂರೈಸುತ್ತಾರೆಂದು ಹೇಳಿಕೆ ನೀಡುತ್ತಿದ್ದಾರೆ, ಮತ್ತೊಂದೆಡೆ ತೆರೆಮೆರೆಯಲ್ಲಿ ಸಿಎಂ ಸ್ಥಾನದಿಂದ ಇಳಿಸಲು ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಇನ್ನೊಂದು 6 ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್​ವೈರನ್ನು ಕೆಳಗಿಳಿಸೋದು ಖಚಿತ ಎಂದಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಹಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು, ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಸಚಿವರ ಎಲ್ಲಾ ಇಲಾಖೆ ಕೆಲಸದಲ್ಲಿ , ಹಣಕಾಸಿನ ವ್ಯವಹಾರದಲ್ಲಿ ಕೂಡ ಸಿಎಂ ಅವರ ಮಗ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇದರಿಂದ ಬಹುತೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಸಿಎಂ ಬದಲು ಅವರ ಮಗ ಆಡಳಿತದಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ

ಇದರಿಂದ ಅಸಮಾಧಾನಗೊಂಡ ಸಚಿವರು ಈಗಾಗಲೇ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಮುಂದೆ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಅವರನ್ನು ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆದಾಗುತ್ತದೆ ಎಂದು ಸಲಹೆ ನೀಡಿದ್ದು ಈ‌ ಕುರಿತು ಕೇಂದ್ರ ಸರಕಾರ ‌ಈ ಬಗ್ಗೆ ಮಾಹಿತಿ ಪಡೆದಿದೆ, ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಕೂಡ ಸಿಎಂ ಅವರನ್ನು ಬದಲಾವಣೆ ಮಾಡಬೇಕೆಂದು ಹೇಳಿದ್ದಾರೆ. ಬಿಎಸ್​ವೈ ಅವರು ತಾವೇ ಉತ್ತಮ‌ ಕೆಲಸ ಮಾಡಿದರೆ ಯಾವುದೇ ಅಭ್ಯಂತರವಿಲ್ಲ ಆದರೆ, ಇದೆ ರೀತಿ ಆಡಳಿತದಲ್ಲಿ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ಮುಂದುವರೆಸಿದರೆ ಬಿಜೆಪಿ ಹೈಕಮಾಂಡ್ ಅವರನ್ನು ತೆಗೆಯುತ್ತಾರೆ. ನಂತರ ಬಿಎಸ್​ವೈಗೆ ಬೆಂಬಲವಾಗಿರುವ ಶಾಸಕರು ಅವರಿಗೆ ಕೈಬಿಡುತ್ತಾರೆ ಎಂದು ಹೇಳಿದರು.

ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ಧ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಶಹಾಪುರ ಕ್ಷೇತ್ರಕ್ಕೆ ಒಂದು ಪೈಸೆ ಕೂಡ ಅನುದಾನ ನೀಡಿಲ್ಲ ಇದರಿಂದ ನಾವು ಕ್ಷೇತ್ರ ಹೇಗೆ ಅಭಿವೃದ್ಧಿ ಮಾಡಬೇಕೆಂದು ಇದೆ ಸಂದರ್ಭದಲ್ಲಿ ಪ್ರಶ್ನೆ ಮಾಡಿದರು.

ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಾರೆ ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಣ ನೀಡುವುದಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಕ್ಕೆ 15 ಕೋಟಿ ಅನುದಾನ ನೀಡಿದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 10 ಕೋಟಿ ರೂ ಆದರು ಅನುದಾನ ನೀಡಬೇಕು, ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಮಾಡಿದ ಕೆಲಸದ ಹಣ ಬಿಡುಗಡೆ ಮಾಡದೆ ಸಿಎಂ ತಡೆಹಿಡಿದಿದ್ದಾರೆಂದು ಸಿಎಂ ಬಿಎಸ್​ವೈ ವಿರುದ್ಧ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.