ಗುರುಮಠಕಲ್: ಪಟ್ಟಣದಲ್ಲಿನ ವಿವಿಧ ನೂತನ ಕಟ್ಟಡಗಳನ್ನು ಮಂಗಳವಾರ ಶಾಸಕ ನಾಗನಗೌಡ ಕಂದಕೂರ ಉದ್ಘಾಟಿಸಿದರು.
ನಗರದಲ್ಲಿ 2018-19ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಲಾದ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದ ಕಟ್ಟಡ, ಪಟ್ಟಣದ ಲಕ್ಷ್ಮಿ ಬಡಾವಣೆಯ ತರಕಾರಿ ಅಂಗಡಿಗಳ ಸಂಕೀರ್ಣ ಹಾಗೂ 2016-17ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿಯಲ್ಲಿ ನಿರ್ಮಿಸಲಾದ ಟೌನ್‌ಹಾಲ್ ಕಟ್ಟಡಗಳನ್ನು ಮಂಗಳವಾರ ಶಾಸಕ ನಾಗನಗೌಡ ಕಂದಕೂರ ಉದ್ಘಾಟಿಸಿದರು.
ಓದಿ: ಸಿದ್ದರಾಮಯ್ಯನವರು ಮಾತನಾಡಲಿಲ್ಲ ಅಂದ್ರೆ ಕಾಂಗ್ರೆಸ್ನಲ್ಲಿ ಕಳೆದುಹೋಗ್ತಾರೆ; ಕಟೀಲ್
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಶರಣು ಆವಂಟಿ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪುರಸಭೆ ಸಿಬ್ಬಂದಿ, ಸದಸ್ಯರು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.