ETV Bharat / state

ಮಸೀದಿಗಳಲ್ಲಿ ಪ್ರಾರ್ಥನೆ ರದ್ದುಗೊಳಿಸುವ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಪೊಲೀಸರ ಸಭೆ

ಪ್ರಾರ್ಥನೆ ರದ್ದುಗೊಳಿಸುವಂತೆ ತಿಳಿಸಲು ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಲಾಯಿತು. ಒಮ್ಮೆ ಕೇವಲ ಇಬ್ಬರಿಗೆ ಅವಕಾಶ ನೀಡಲಾಗುವುದು. ಅದೂ ಐದು ನಿಮಿಷದಲ್ಲಿ ಮುಗಿಸುವಂತೆ ಸೂಚಿಸಿದರು.

meeting
meeting
author img

By

Published : Mar 28, 2020, 2:24 PM IST

ಸುರಪುರ: ನಗರದ ಮಸೀದಿಗಳಲ್ಲಿ ಪ್ರಾರ್ಥನೆ ರದ್ದುಗೊಳಿಸುವಂತೆ ತಿಳಿಸಲು ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ಆರಕ್ಷಕ ನಿರೀಕ್ಷಕ ಎಸ್.ಎಂ.ಪಾಟೀಲ ಮಾತನಾಡಿ, ಕೊರೊನಾ ಇಂದು ಮಹಾಮಾರಿಯಾಗಿ ಜಗತ್ತಿಗೆ ಕಾಡುತ್ತಿದೆ. ಇದಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಇಂತಹ ಸಂದರ್ಭದಲ್ಲಿ ತಾವು ಪ್ರಾರ್ಥನೆ ಮಾಡಲು ಗುಂಪು ಗುಂಪಾಗಿ ಸೇರುವುದನ್ನು ನಿಲ್ಲಿಸುವಂತೆ ತಿಳಿಸಿದರು.

ಪೊಲೀಸ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆ

ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ, ಕೇವಲ ಐದು ಜನ ಸೇರುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪೊಲೀಸ್ ಇನ್ಸ್​ಪೆಕ್ಟರ್​, ಐದು ಜನರು ಸೇರುವುದನ್ನು ಒಪ್ಪುವುದಿಲ್ಲವೆಂದು ತಿಳಿಸಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಕೇವಲ ಇಬ್ಬರಿಗೆ ಅವಕಾಶ ನೀಡಲಾಗುವುದು. ಅದೂ ಐದು ನಿಮಿಷದಲ್ಲಿ ಮುಗಿಸುವಂತೆ ಸೂಚಿಸಿದರು.

ಇದಕ್ಕೆ ಒಪ್ಪಿದ ಮುಖಂಡರು, ಕೇವಲ ಇಬ್ಬರೇ ಪ್ರಾರ್ಥನೆ ಮಾಡುವುದಾಗಿ ಒಪ್ಪಿದರು. ಇಡೀ ರಾಜ್ಯಾದ್ಯಂತ ಇಂತಹ ನಿಯಮ ಜಾರಿಗೊಳಿಸುವ ಮೂಲಕ ಜನ ಗುಂಪು ಸೇರುವುದನ್ನು ತಡೆಯುವ ಜೊತೆಗೆ ಕೊರೊನಾ ಹರಡದಂತೆ ತಡೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.