ETV Bharat / state

ಜಕಣಾಚಾರಿ ಸಂಸ್ಮರಣಾ ದಿನವನ್ನ ಸರ್ಕಾರದಿಂದಲೇ ಆಚರಿಸಬೇಕು: ವಿಶ್ವಕರ್ಮ ಮಹಾಸಭಾ ಮನವಿ - Jakkachari Memorial Day press meet yadgiri

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಯಾದಗಿರಿ ಜಿಲ್ಲಾ ವಿಶ್ವಕರ್ಮ ಮಹಾಸಭಾ ಮುಖಂಡರು ಸುದ್ದಿಗೋಷ್ಠಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿ
author img

By

Published : Nov 12, 2019, 11:46 PM IST

ಯಾದಗಿರಿ: ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ಮಹಾಸಭಾ ಮುಖಂಡರು ಸುದ್ದಿಗೋಷ್ಠಿ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಮಹಾಸಭಾದ ಆನಂದ ವಿಶ್ವಕರ್ಮ, ಶ್ರೀ ರಮೇಶ ಹತ್ತಿಕುಣಿ ಸೇರಿದಂತೆ ಹಲವು ಮುಖಂಡರು, ಕರ್ನಾಟಕ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಅಮರಶಿಲ್ಪಿ ಜಕಣಾಚಾರಿ ಅವರನ್ನ ಸ್ಮರಿಸಬೇಕಾದುದು ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 2015-16ನೇ ಸಾಲಿನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚನೆ ಮಾಡಲಾಯಿತು. ನಂತರ ಸಿಎಂ ಯಡಿಯೂರಪ್ಪ ವಿಶ್ವಕರ್ಮ ಸಮಾಜಕ್ಕೆ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲು ಸರ್ಕಾರದಿಂದ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಜಕಣಾಚಾರಿ ಅವರ ಸಂಸ್ಮರಣಾ ದಿನವನ್ನ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯ ಇಲ್ಲವೇ ಲಲಿತಕಲಾ ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ವಿಶ್ವಕರ್ಮ ಮಹಾಸಭಾ ಸಿಎಂ ಅವರನ್ನ ಒತ್ತಾಯಿಸಿದೆ.

Intro:ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸರ್ಕಾರದ ವತಿಯಿಂದ ಆಚರಿಸಬೇಕು ಅಂತು ಯಾದಗಿರಿ ಜಿಲ್ಲಾ ವಿಶ್ವಕರ್ಮ ಮಹಾಸಭಾ ಮುಖಂಡರು ಸುದ್ದಿಗೋಷ್ಠಿ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ...

Body:ಯಾದಗಿರಿಯಲ್ಲಿಂದು ನಡೆದ ಸುದ್ದಿಗೊಷ್ಠಯಲ್ಲಿ ಮಾತನಾಡಿದ ವಿಶ್ವಕರ್ಮ ಮಹಾಸಭಾದ ಆನಂದ ವಿಶ್ವಕರ್ಮ, ಶ್ರೀ ರಮೇಶ ಹತ್ತಿಕುಣಿ ಸೇರಿದಂತೆ ಹಲವು ಮುಖಂಡರು, ಕರ್ನಾಟಕ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಅಮರಶಿಲ್ಪಿ ಜಕಣಾಚಾರಿಯವರನ್ನು ಸ್ಮರಿಸಬೇಕಾದುದು ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ.ಜಕಣಾಚಾರ್ಯ ಜಯಂತಿ ಸರ್ಕಾರದ ಹೀಗಾಗಿಯಿಂದ ಆಚರಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಮಹಾಸಭಾ ನಿರಂತರ ಹೋರಾಟ ಮಾಡುತ್ತಿದೆ. ವಿಶ್ವಕರ್ಮ ಸಮಾಜವಷ್ಟೇ ಅಲ್ಲದೇ ಕನ್ನಡದ ಮನಸ್ಸುಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಹಿರಿಮೆ ಬಲ್ಲವರೆಲ್ಲರ ಹಕ್ಕೊತ್ತಾಯವಾಗಿದೆ ಅಂತ ತಿಳಿಸಿದರು...ಈ ಹಿಂದಿನ ಸಿದ್ರಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ೨೦೧೫-೧೬ನೇ ಸಾಲಿನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚನೆ ಮಾಡಲಾಯಿತು. ನಂತರ ಮಾನ್ಯ ಹಾಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ನವರು ವಿಶ್ವಕರ್ಮ ಸಮಾಜಕ್ಕೆ ಚುನಾವಣೆಗೂ ಮುನ್ನ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಯನ್ನು ಸರ್ಕಾರದಿಂದ ಆಚರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು.ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆಯನ್ನು ಘೋಷಣೆ ಮಾಡಬೇಕು ಅಂತ ಈ ಸಂದರ್ಭದಲ್ಲಿ ಮನವಿ ಮಾಡಿದ್ದರೆ.

Conclusion:ಅದಲ್ಲದೆ ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯ ಇಲ್ಲವೇ ಲಲಿತಕಲಾ ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೆಕೆಂದು ಅಂತ ವಿಶ್ವಕರ್ಮ ಮಹಾಸಭಾ ಒತ್ತಾಯ ಮಾಡಿದೆ...

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.