ETV Bharat / state

ಹೆಚ್​ಡಿಕೆ ಕಾಲಕ್ಕೆ ತಕ್ಕಂತೆ ಆರೋಪ ಮಾಡ್ತಾರೆ: ಜಗದೀಶ್ ಶೆಟ್ಟರ್ - ಡ್ರಗ್ ಮಾಫಿಯಾ

ಈ ಹಿಂದೆ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್​ನ ಕೆಲ ಗುಂಪುಗಳು ತಂತ್ರಗಾರಿಕೆ ಮಾಡುವ ಮೂಲಕ ನನ್ನನ್ನ ಅಧಿಕಾರದಿಂದ ಇಳಿಸಲು ಪ್ರಯತ್ನ ಮಾಡಿದ್ದರು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ರು. ಈಗ ಡ್ರಗ್ಸ್​ ಮಾಫಿಯಾದ ಹಣದಿಂದ ತಮ್ಮ ಸರ್ಕಾರ ಉರುಳಿದೆ ಎಂದು ಆಪಾದನೆ ಮಾಡ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

shettar
shettar
author img

By

Published : Sep 1, 2020, 3:31 PM IST

ಯಾದಗಿರಿ: ಕಾಲಕ್ಕೆ ತಕ್ಕಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪ ಮಾಡ್ತಿದ್ದು, ಇದಕ್ಕೆ ಅರ್ಥವಿಲ್ಲ. ಅವರ ಸರ್ಕಾರ ಡ್ರಗ್ಸ್​ ಮಾಫಿಯಾದಿಂದ ಉರುಳಿದೆ ಎಂದು ಅಂದೇ ಹೇಳಬೇಕಿತ್ತಲ್ಲ, ಇವಾಗ ನೆನಪಾಯ್ತಾ ಅವ್ರಿಗೆ ಎಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಜಿಲ್ಲೆಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್​ನ ಕೆಲ ಗುಂಪುಗಳು ತಂತ್ರಗಾರಿಕೆ ಮಾಡುವ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈಗ ಡ್ರಗ್ಸ್​​ ಮಾಫಿಯಾದಿಂದ ತಮ್ಮ ಸರ್ಕಾರ ಬಿತ್ತು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ಈಗ ಡ್ರಗ್ಸ್​ ಮಾಫಿಯಾದ ಹಣದಿಂದ ತನ್ನ ಸರ್ಕಾರ ಉರುಳಿದೆ ಎಂದು ಆಪಾದನೆ ಮಾಡ್ತಿದ್ದಾರೆ. ಮುಂದೆ ಮತ್ತೊಂದಕ್ಕೆ, ಹೀಗೆ ಕಾಲಕ್ಕೆ ತಕ್ಕಂತೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಈ ಹಿಂದೆ ಹೆಚ್​ಡಿಕೆ ಮುಖ್ಯಮಂತ್ರಿ ಆಗಿದ್ದಾಗ ಇಂಟಲಿಜೆನ್ಸಿಯಿಂದ ಮಾಹಿತಿ ಗೊತ್ತಿರಬೇಕಿತ್ತಲ್ಲ, ಆವಾಗ ಡ್ರಗ್ಸ್​ ಮಾಫಿಯಾ ಇರಲಿಲ್ಲವಾ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.

ಯಾವುದೇ ಮುಲಾಜಿಲ್ಲದೆ ನಮ್ಮ ಸರ್ಕಾರ ಹಾಗೂ ಗೃಹ ಇಲಾಖೆ ಡ್ರಗ್ಸ್​ ಮಾಫಿಯಾ ಹತ್ತಿಕ್ಕುವ ಪ್ರಯತ್ನ ಮಾಡುತ್ತೆ. ಇದರಲ್ಲಿ ದೊಡ್ಡವರಿರಲಿ, ಸಣ್ಣವರಿರಲಿ ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.