ETV Bharat / state

ಹಸಿವಿನಿಂದ ಒದ್ದಾಡುತ್ತಿದ್ದ ವಿಶಿಷ್ಟಚೇತನನಿಗೆ ಅನ್ನದಾತರಾದ ಪೌರಕಾರ್ಮಿಕರು

author img

By

Published : Mar 25, 2020, 7:33 PM IST

ಯಾದಗಿರಿಯ ಸುರಪುರ ಬಸ್ ನಿಲ್ದಾಣದಲ್ಲಿ ವಿಶಿಷ್ಟಚೇತನನೋರ್ವ ಅನ್ನ-ನೀರು ಸಿಗದೆ ಹಸಿವಿನಿಂದ ಒದ್ದಾಡುತ್ತಿದ್ದ. ಈ ವೇಳೆ ಲಾಕ್‌ಡೌನ್ ಕುರಿತು ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದ ನಗರಸಭೆಯ ಕಾರ್ಮಿಕರು ಆತನಿಗೆ ಊಟ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Humanitarian work by surapur civic worker

ಸುರಪುರ(ಯಾದಗಿರಿ): ಭಾರತ ಲಾಕ್‌ಡೌನ್ ಆದ ಹಿನ್ನೆಲೆ ಅನ್ನ-ನೀರು ಸಿಗದೆ ಕಂಗಾಲಾಗಿದ್ದ ವಿಶಿಷ್ಟ ಚೇತನನೋರ್ವನಿಗೆ ಪೌರ ಕಾರ್ಮಿಕರು ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸುರಪುರ ಬಸ್ ನಿಲ್ದಾಣದಲ್ಲಿ ವಿಶಿಷ್ಟಚೇತನನೋರ್ವ ಅನ್ನ-ನೀರು ಸಿಗದೆ ಹಸಿವಿನಿಂದ ಬಳಲುತ್ತಿದ್ದ. ಈ ವೇಳೆ ಲಾಕ್‌ಡೌನ್ ಕುರಿತು ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದ ನಗರಸಭೆಯ ಕಾರ್ಮಿಕರಾದ ಜಗದೀಶ್ ಶಾಖನವರ್, ಗೌತಮ್ ತೇಲ್ಕರ್ ಮತ್ತು ಯಲ್ಲಪ್ಪ ಉಲ್ಪೇನವರ್ ಅವರು ಈತನ ನರಳಾಟ ಕಂಡು ಊಟ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪೌರ ಕಾರ್ಮಿಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.