ETV Bharat / state

ಸೋಂಕಿತನ ಮೃತದೇಹವನ್ನು ದರದರನೆ ಎಳೆದು, ಗುಂಡಿಗೆಸೆದ ಸಿಬ್ಬಂದಿ... ಮತ್ತೊಂದು ಅಮಾನವೀಯ ಘಟನೆ ಬಯಲು! - ಯಾದಗಿರಿಯಲ್ಲಿ ಶವವನ್ನು ಗುಂಡಿಗೆಸೆಯುವ ದೃಶ್ಯ ವೈರಲ್​,

ಕೊರೊನಾ ಸೋಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯತೆ ಪ್ರದರ್ಶಿಸಿದ ಘಟನೆಗಳು ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ನಡೆದಿದ್ದವು. ಈಗ ಇಂತಹದ್ದೇ ಮತ್ತೊಂದು ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

video viral of corona infected, funeral video viral of corona infected, funeral video viral of corona infected in Yadagiri, ಶವವನ್ನು ಗುಂಡಿಗೆಸೆದ ದೃಶ್ಯ ವೈರಲ್​, ಯಾದಗಿರಿಯಲ್ಲಿ ಶವವನ್ನು ಗುಂಡಿಗೆಸೆಯುವ ದೃಶ್ಯ ವೈರಲ್​, ಯಾದಗಿರಿಯಲ್ಲಿ ಶವವನ್ನು ಗುಂಡಿಗೆಸೆಯುವ ದೃಶ್ಯ ವೈರಲ್​ ಸುದ್ದಿ,
ಬಳ್ಳಾರಿ ಬಳಿಕ ಯಾದಗಿರಿಯಲ್ಲಿ ಅಮಾನವೀಯ
author img

By

Published : Jul 1, 2020, 4:37 PM IST

ಯಾದಗಿರಿ: ಬಳ್ಳಾರಿ, ದಾವಣಗೆರೆ ಬಳಿಕ ಈಗ ಯಾದಗಿರಿಯಲ್ಲೂ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ದರದರನೆ ಎಳೆದೊಯ್ದು ಅಂತಿಮ ಸಂಸ್ಕಾರ‌ ನಡೆಸಿದ್ದು, ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.

ಬಳ್ಳಾರಿ ಬಳಿಕ ಯಾದಗಿರಿಯಲ್ಲಿ ಅಮಾನವೀಯ ಘಟನೆ

ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕೋವಿಡ್ ಸೋಂಕಿತ ವ್ಯಕ್ತಿಯ ಮೃತದೇಹವನ್ನ ಆರೋಗ್ಯ ಇಲಾಖೆ ಸಿಬ್ಬಂದಿಯು ಆ್ಯಂಬುಲೆನ್ಸ್​ನಿಂದ ಎಳೆದುತಂದು ಶವದ ಗುಂಡಿಯಲ್ಲಿ ಎಸೆದಿರುವ ವಿಡಿಯೋ ಈಗ ವೈರಲ್​ ಆಗಿದೆ.

ರಾಯಚೂರಿನ ಸಿರವಾರದಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಮಗಳ ಮದುವೆ ಮರುದಿನವೇ ಮೃತಪಟ್ಟಿದ್ದರು. ಮೃತನ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹುಟ್ಟೂರು ಹೊನಗೇರಾದಲ್ಲಿ ಅಂತ್ಯ ಸಂಸ್ಕಾರ ಮಾಡಲು ಆತನ ಕುಟುಂಬ ನಿರ್ಧರಿಸಿದ್ದ ಹಿನ್ನೆಲೆ ಶವವನ್ನು ಸ್ವಗ್ರಾಮಕ್ಕೆ ತರಲಾಗಿತ್ತು. ಮಕ್ಕಳು, ಹೆಂಡತಿ ಅನುಪಸ್ಥಿತಿಯಲ್ಲೇ ನಡೆದಿದ್ದ ಅಂತಿಮ ಸಂಸ್ಕಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ಸಿಬ್ಬಂದಿ ನಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ತೋರಿದ ಈ ನಿರ್ಲಕ್ಷ್ಯದಿಂದ ಯಾದಗಿರಿ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.