ETV Bharat / state

ಸುರಪುರ: ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ - ಸುರಪುರ ಯಾದಗಿರಿ ಲೆಟೆಸ್ಟ್ ನ್ಯೂಸ್

ರೈತ ಗುತ್ತಪ್ಪಗೌಡ ಬಿರಾದಾರ್ ಎಂಬುವವರು 10 ಎಕರೆ 23 ಗುಂಟೆ ಜಮೀನು ಹೊಂದಿದ್ದು, ಸಹಕಾರ ಸಂಘದಲ್ಲಿ 40 ಸಾವಿರ ಕೆಂಭಾವಿ ಎಸ್.ಬಿ.ಐ ಶಾಖೆಯಲ್ಲಿ 1.50 ಲಕ್ಷ ಹಾಗೂ 4 ಲಕ್ಷ ರೂಪಾಯಿಗಳ ಕೈಸಾಲ ಮಾಡಿಕೊಂಡಿದ್ದರು. ಸದ್ಯ ರೈತ ಆತ್ಮಹತ್ಯೆಗೆ ಶರಣಾಗಿದ್ದು, ಸಾಲದ ಹಿನ್ನಲೆ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ತಿಳಿಸಿದ್ದಾರೆ.

Former committed to suicide
Former committed to suicide
author img

By

Published : Jun 19, 2020, 8:21 PM IST

ಸುರಪುರ: ತಾಲೂಕಿನ ಕೆಂಭಾವಿ ಬಳಿಯ ಎಮ್.ಬೊಮ್ಮನಹಳ್ಳಿ ಗ್ರಾಮದ ರೈತ ಗುತ್ತಪ್ಪಗೌಡ ಬಿರಾದಾರ್ (41 ವರ್ಷ) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ರೈತ 10 ಎಕರೆ 23 ಗುಂಟೆ ಜಮೀನು ಹೊಂದಿದ್ದು, ಸಹಕಾರ ಸಂಘದಲ್ಲಿ 40 ಸಾವಿರ, ಕೆಂಭಾವಿ ಎಸ್.ಬಿ.ಐ ಶಾಖೆಯಲ್ಲಿ 1.50 ಲಕ್ಷ ಹಾಗೂ 4 ಲಕ್ಷ ರೂಪಾಯಿಗಳ ಕೈಸಾಲ ಮಾಡಿಕೊಂಡಿದ್ದರು. ಆದ್ರೆ, ಸರಿಯಾದ ಬೆಳೆಯೂ ಬಾರದೆ, ಸಾಲಗಾರರಿಗೆ ಉತ್ತರ ಕೊಡಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಮೃತ ವ್ಯಕ್ತಿಯ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ಒದ್ದಾಡುತ್ತಿರುವುದನ್ನು ಪತ್ನಿ ಮತ್ತು ಮಕ್ಕಳು ಕಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಸದ್ಯ ಈ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರೈತ, ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.