ETV Bharat / state

ಸಾಲಬಾದೆ ತಾಳದೆ ರೈತ ಆತ್ಮಹತ್ಯೆ - Yadagiri Farmer commits suicide

ಸಾಲಬಾದೆ ತಾಳದೆ ರೈತ ಖಾಸಿಂಸಾಬ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.

ಸಾಲಬಾದೆ ತಾಳದೆ ರೈತ ಆತ್ಮಹತ್ಯೆ
ಸಾಲಬಾದೆ ತಾಳದೆ ರೈತ ಆತ್ಮಹತ್ಯೆ
author img

By

Published : Sep 22, 2020, 12:29 AM IST

ಯಾದಗಿರಿ: ಸಾಲಬಾದೆ ತಾಳದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಖಾಸಿಂಸಾಬ್ (52) ಆತ್ಮಹತ್ಯೆ ಮಾಡಿಕೊಂಡ ರೈತ. ಕಳೆದ ಎರಡು ವರ್ಷಗಳಿಂದ ಅವರು 6 ಎಕರೆ ಜಮೀನಿನಲ್ಲಿ ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದರು. ಆದ್ರೆ ಸರಿಯಾದ ಸಮಯಕ್ಕೆ ಮಳೆ ಬಾರದೆ ನಷ್ಟ ಅನುಭವಿಸಿದ್ದರು ಎನ್ನಲಾಗುತ್ತಿದೆ.

ಬ್ಯಾಂಕ್, ಕೈ ಸಾಲ ಸೇರಿದಂತೆ ಖಾಸಿಂಸಾಬ್ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮಾಡಿದ ಸಾಲ ತಿರಿಸಲಾಗಾದೆ ರೈತ ಖಾಸಿಂಸಾಬ್ ಮನನೊಂದು ನಿನ್ನೆ ಮನೆಯಲ್ಲಿ ವಿಷ ಸೇವಿಸಿದ್ದರು. ವಿಷ ಸೇವಿಸಿದ್ದ ಖಾಸಿಂಸಾಬ್​​ರನ್ನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರೈತ ಖಾಸಿಂಸಾಬ್ ಸಾವನ್ನಪ್ಪಿದ್ದಾರೆ. ಈ ಕುರಿತು ವಡಗೇರಾ ಠಾಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.