ಯಾದಗಿರಿ: ದಲಿತ ವ್ಯಕ್ತಿಯ ಜಾತಿ ನಿಂದಿಸಿ ಕುಟುಂಬವನ್ನೆ ಥಳಿಸಿದ ಘಟನೆ ಜಿಲ್ಲೆಯ ಹಾಲಗೇರಾ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ನಡೆದಿದೆ.ಮಾಳಪ್ಪ ಎನ್ನುವ ದಲಿತ ವ್ಯಕ್ತಿಯು ಗ್ರಾಮದಲ್ಲಿ ನಿಂತಾಗಸವರ್ಣೀಯರಾದ ಬೀರಪ್ಪ ಹಾಗೂ ಶಿವಪ್ಪನ ಸಂಗಡಿಗರು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಲಿತ ವ್ಯಕ್ತಿ ಮಾಳಪ್ಪ ಇದನ್ನು ವಿರೋಧಿಸಿದ್ದು, ಮಾತಿನ ಚಕಮುಕಿ ನಡೆದು ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ಮರುದಿನದಲಿತ ವ್ಯಕ್ತಿಯಾದ ಮಾಳಪ್ಪ ತನ್ನ ಕುಟುಂಬ ಸಮೇತ ಹಾಲಗೂರ ಯಲಮ್ಮನ ಜಾತ್ರೆಗೆ ಬಂದಾಗ ಗಂಪು ಕಟ್ಟಿಕೊಂಡು ಬಂದ ಬೀರಪ್ಪ, ಮಾಳಪ್ಪ ದಲಿತ ಕುಟುಂಬದವರ ಮೇಲೆ ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಮಾಳಪ್ಪ ಅಣ್ಣನಿಗೆ ರಕ್ತಸ್ರಾವವಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು 12 ಜನರ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.