ETV Bharat / state

ಯಾದಗಿರಿಯಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ: 11ಕ್ಕೇರಿದ ಸೋಂಕಿತರು

ಗುರಮಿಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ ದಂಪತಿ ಮಗುವಿಗೆ ಸೋಂಕು​ ತಾಗಿದ್ದು, ಪಿ-1,256 ಎಂದು ಹೆಸರಿಸಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Covid 19 infection confirmed to two year old child in Yadagiri
ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು
author img

By

Published : May 19, 2020, 7:34 PM IST

ಯಾದಗಿರಿ: ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ ಎರಡು ವರ್ಷದ ಮಗುವಿಗೆ ಕೊರೊನಾ ಸೊಂಕು ತಗುಲಿರುವುದು ಧೃಡಪಟ್ಟಿದ್ದು, ಅಧಿಕಾರಿಗಳು ಮಗುವಿನ ಪೋಷಕರ ಸ್ಯಾಂಪಲ್​ ಸಂಗ್ರಹಿಸಿದ್ದಾರೆ.

ಜಿಲ್ಲೆಯ ಗುರಮಿಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ ದಂಪತಿ ಮಗುವಿಗೆ ವೈರಸ್​ ತಾಗಿದ್ದು, ಪಿ-1,256 ಎಂದು ಹೆಸರಿಸಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಮೇ 11ರಂದು ಮುಂಬೈನಿಂದ 11 ಜನ ಖಾಸಗಿ ವಾಹನದ ಮೂಲಕ ಜಿಲ್ಲೆಗೆ ಆಗಮಿಸಿದ್ದರು. ಮುಂಬೈನಿಂದ ಆಗಮಿಸಿದ ಅವರನ್ನು ತಪಾಸಣೆ ಮಾಡಿದ ಬಳಿಕ ತಾಲೂಕಿನ ಗುಂಜನೂರ ಕೇಂದ್ರದಲ್ಲಿ ಕ್ವಾರೆಂಟೈನ್​ ಮಾಡಲಾಗಿತ್ತು.

ಯಾದಗಿರಿ ಜಿಲ್ಲೆಯ ಆಸ್ಪತ್ರೆ

ಈ 11 ಜನರ ಪೈಕಿ ಚಿನ್ನಾಕಾರ ಗ್ರಾಮದ ದಂಪತಿಯ ಎರಡು ವರ್ಷದ ಮಗುವಿಗೆ ಪಾಸಿಟಿವ್ ವರದಿ ಬಂದಿದ್ದು, ಮಗುವಿನ ತಂದೆ- ತಾಯಿಯನ್ನ ನೂತನ ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್​ಗೆ ದಾಖಲಿಸಲಾಗಿದೆ.

ಹಸಿರು ವಲಯ ಯಾದಗಿರಿಗೆ ಅಂತಾರಾಜ್ಯಗಳಿಂದ ಆಗಮಿಸುತ್ತಿರುವ ವಲಸೆ ಕೂಲಿ ಕಾರ್ಮಿಕರಲ್ಲಿಯೇ ಈ ಡೆಡ್ಲಿ ಕೊರೊನಾ ಸೋಂಕು ಪತ್ತೆ ಆಗುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.