ETV Bharat / state

ಪೋಷಕರಿಂದ ಬೇರ್ಪಟ್ಟ ಬಾಲಕನ ವೇದನೆ; ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರಿಕ

author img

By

Published : Aug 29, 2020, 10:44 PM IST

ತಂದೆಯೊಂದಿಗೆ ಬೇರೆ ಊರಿಗೆ ಬಂದಿದ್ದ ಬಾಲಕನೊಬ್ಬ ತಪ್ಪಿಸಿಕೊಂಡು ಪರಿತಪಿಸುತ್ತಿದ್ದ ವೇಳೆ ಸ್ಥಳೀಯರೊಬ್ಬರು ಆತನಿಗೆ ತಿಂಡಿ ಕೊಡಿಸಿ, ನಂತರ ಪೊಲೀಸ್​ ಠಾಣೆಗೆ ಕರೆದೊಯ್ಡು ಪೋಷಕರ ಬಳಿ ತಲುಪಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

citizen helped the missing boy
ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರೀಕ

ಯಾದಗಿರಿ: ಪೋಷಕರಿಗಾಗಿ ಅಂಗಲಾಚುತ್ತಿದ್ದ ಬಾಲಕನೊಬ್ಬನನ್ನು ಕಂಡು ಸ್ಥಳೀಯರೊಬ್ಬರು ಉಪಹಾರ ಕೊಡಿಸಿ, ಬಾಲಕನನ್ನ ಪೊಲೀಸರ ಬಳಿಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರಿಕ
ತಂದೆಯೊಂದಿಗೆ ಯಾದಗಿರಿ ನಗರಕ್ಕೆ ಆಗಮಿಸಿದ್ದ ಚಿಕ್ಕ ಬಾಲಕನೊರ್ವ ಕೇಂದ್ರ ಬಸ್ ನಿಲ್ದಾಣದ ಬಳಿ ತಂದೆಯಿಂದ ಬೇರ್ಪಟ್ಟು ದಿಕ್ಕು ತೋಚದೆ ಅಳುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕ ಮೊಹಮ್ಮದ ಜಾಫರ್ ಎಂಬುವರು ಅಳುತ್ತಿದ್ದ ಬಾಲಕನಿಗೆ ಹೊಟೇಲ್ ಒಂದರಲ್ಲಿ ಉಪಹಾರ ಕೊಡಿಸಿ, ನಂತರ ನಗರ ಪೊಲೀಸ್​​ ಠಾಣೆಗೆ ತಲುಪಿಸಿ ಉದಾರತೆ ಮೆರೆದಿದ್ದಾರೆ.

ಇನ್ನು ದುಃಖದಲ್ಲಿದ್ದ ಬಾಲಕ ತನ್ನ ಗ್ರಾಮ ಸಂಕನೂರ. ನನ್ನ ತಂದೆ ಜೊತೆ ಬಂದಿದ್ದೆ ಅಂತ ಹೇಳಿದ್ದಾನೆ. ಬಾಲಕನು ಹೇಳಿದ ಹಾಗೆ ಸಂಕನೂರ ಗ್ರಾಮ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿದ್ದು, ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಬಳಿ ತಲುಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.