ETV Bharat / state

ಲಕ್ಕಿ ಡಿಪ್ ಸ್ಕೀಮ್ ಹೆಸರಲ್ಲಿ ಅಮಾಯಕರಿಗೆ ಭಾರಿ ಪಂಗನಾಮ!: ದೂರು ದಾಖಲು - ಯಾದಗಿರಿಯ ಲಕ್ಷ್ಮಿ ನಗರ

ಲಕ್ಕಿ ಡಿಪ್ ಸ್ಕೀಮ್​ನಲ್ಲಿ ಕಾರು, ಬೈಕ್​ ಸಿಗುತ್ತದೆ ಎಂದು ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಎಸ್ಕೇಪ್ ಆಗಿದೆ. ಇದೀಗ ಖದೀಮರಿಂದ ಪಂಗನಾಮ ಹಾಕಿಸಿಕೊಂಡ ಜನರು, ನ್ಯಾಯಕ್ಕಾಗಿ ಎಸ್​ಪಿ ಕಚೇರಿ ಕದ ತಟ್ಟಿದ್ದಾರೆ.

Cheating to innocent villager
ಲಕ್ಕಿ ಡಿಪ್ ಸ್ಕೀಮ್ ಹೆಸರಿನಲ್ಲಿ ಅಮಾಯಕ ಹಳ್ಳಿಗರಿಗೆ ಪಂಗನಾಮ
author img

By

Published : Jul 16, 2021, 2:00 PM IST

ಯಾದಗಿರಿ: ನಿಮಗೆ ಲಕ್ಕಿ ಡಿಪ್ ಸ್ಕೀಮ್​ನಲ್ಲಿ ಕಾರು, ಬೈಕ್​ ಸಿಗುತ್ತದೆ ಎಂದು ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಎಸ್ಕೇಪ್ ಆಗಿದೆ.

ಲಕ್ಕಿ ಡಿಪ್ ಸ್ಕೀಮ್ ಹೆಸರಿನಲ್ಲಿ ಅಮಾಯಕ ಹಳ್ಳಿಗರಿಗೆ ಪಂಗನಾಮ

ಕಳೆದ ಜನವರಿ ತಿಂಗಳಲ್ಲಿ ಕೆಎಸ್​ಎಸ್​ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಖದೀಮರು ಕಂಪನಿ ಆರಂಭಿಸಿದ್ದರು. ಬಳಿಕ ಲಕ್ಕಿಡಿಪ್ ಸ್ಕೀಮ್ ಮಾಡಿ ಕಾರು, ಬೈಕ್, ಚಿನ್ನಾಭರಣ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಬಂಪರ್ ಲಕ್ಕಿ ಸ್ಕೀಮ್​ನಲ್ಲಿ ಲಾಟರಿ ಮೂಲಕ ನೀಡುತ್ತೇವೆ ಎಂದು ಸ್ಥಳೀಯರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡಿದ್ದರು.

ಈ ಪ್ರಕರಣದ ಸಂಬಂಧ ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಭಗವಾನ್​, ಯಾದಗಿರಿ ನಗರ ಸೇರಿದಂತೆ ಯರಗೋಳ, ಬಂದಳ್ಳಿ, ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿನ 2,000ಕ್ಕೂ ಅಧಿಕ ಮಂದಿಯಿಂದ 8 ಕಂತುಗಳಲ್ಲಿ ಪ್ರತಿ ಕಂತಿಗೆ 399 ರೂ. ವಸೂಲಿ ಮಾಡಿ, ಪ್ರತಿಯೊಬ್ಬರಿಂದಲೂ 3,000 ರೂ.ಗಳಂತೆ ಸುಮಾರು‌ 60 ಲಕ್ಷಕ್ಕೂ ಅಧಿಕ ಹಣ ಪಡೆದು ಜಾಗ ಖಾಲಿ ಮಾಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಇಂದ್ರಜಿತ್​ ಲಂಕೇಶ್​ ಭೇಟಿ ವಿಚಾರ.. ಅದು ಹಳೆ ಫೋಟೋ, ನನ್ನನ್ಯಾಕೆ ತಳಕು ಹಾಕೊಂಡಿದ್ದೀರಾ ಎಂದ ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.