ಯಾದಗಿರಿ: ಅಧಿಕಾರಿವೋರ್ವ ಕಲಾವಿದನಾಗಿರುವ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕೇಳಿಸಿಕೊಂಡ ಪುತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರ ವಲಯದ ಭೀಮಾ ನದಿಯಲ್ಲಿ ನಡೆದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ದತ್ತಪ್ಪ ಸಾಗನೂರ್ಗೆ ಕಲಾವಿದ ಶಂಕರ ಶಾಸ್ತ್ರಿ ಜೀವನೋಪಾಯಕ್ಕಾಗಿ ಸರ್ಕಾರಿ ಕಾರ್ಯಕ್ರಮ ನೀಡುವಂತೆ ಕೇಳಿದ್ದrಂತೆ. ಸರ್ಕಾರಿ ಕಾರ್ಯಕ್ರಮ ಕೇಳಿದ್ದಕ್ಕೆ ಶಂಕರ ಶಾಸ್ರ್ತಿಗೆ ದತ್ತಪ್ಪಾ ಸಾಗನೂರ್ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ. ದತ್ತಪ್ಪ ಸಾಗನೂರ ಜೀವ ಬೆದರಿಕೆ ಆಡಿಯೋ ಕೇಳಿಸಿಕೊಂಡ ಕಲಾವಿದ ಶಂಕರ ಶಾಸ್ತ್ರೀ aವರ ಪುತ್ರಿ ಭವಾನಿ ಮನನೊಂದು ಭೀಮಾ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.
ಇಂದು ಭೀಮಾ ನದಿ ದಡದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಈಜು ತಜ್ಞರಿಂದ ಯುವತಿ ಭವಾನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಯಾದಗಿರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಅವರೊಂದಿಗೆ ಶಂಕರ ಶಾಸ್ತ್ರೀ ಹಾಗೂ ಅವರ ಕುಟುಂಬ ಅಧಿಕಾರಿ ದತ್ತಪ್ಪ ಸಾಗನೂರನಿಂದ ಜೀವ ಬೇದರಿಕೆ ನೀಡಿರುವ ಕುರಿತು ತಮ್ಮ ಅಳಲನ್ನ ತೋಡಿಕೊಂಡಿದ್ದರು ಎಂದು ಹೇಳಲಾಗ್ತಿದೆ.