ETV Bharat / state

ಅಯೋಧ್ಯೆಯಲ್ಲಿ ಭೂಮಿ ಪೂಜೆ: ಇಲ್ಲಿನ ಸಾವಿರಾರು ಮನೆಗಳ ಮೇಲೆ ಕೇಸರಿ ಧ್ವಜಾರೋಹಣ

ತಾಲೂಕಿನ ಕೆಂಭಾವಿಯಲ್ಲಿ ಅಯೋಧ್ಯೆಯ ರಾಮಮಂದಿರ ಭೂಮಿ ಪೂಜೆ ಚಾಲನೆಗೆ ಶುಭ ಹಾರೈಸಿ ಸಾವಿರಾರು ಮನೆಗಳ ಮೇಲೆ ಕೇಸರಿ ಧ್ವಜಾರೋಹಣ ಮಾಡಲಾಗಿದೆ.

Rama Mandira Bhoomi Pooja
ರಾಮಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಕೆಂಭಾವಿ ಜನತೆಯಿಂದ ವಿಶೇಷವಾಗಿ ಶುಭ ಹಾರೈಕೆ
author img

By

Published : Aug 4, 2020, 10:57 PM IST

ಸುರಪುರ: ಅಯೋಧ್ಯೆಯಲ್ಲಿ ಚಾಲನೆ ನೀಡಲಿರುವ ಶ್ರೀರಾಮ ಮಂದಿರ ನಿರ್ಮಾಣ ಭೂಮಿ ಪೂಜೆಗೆ ಸುರಪುರ ತಾಲೂಕಿನ ಕೆಂಭಾವಿಯ‌ ಜನತೆ ವಿಶೇಷವಾಗಿ ಶುಭ ಹಾರೈಸಿದ್ದಾರೆ.

ಕೆಂಭಾವಿ ಪಟ್ಟಣದಲ್ಲಿ ಆರ್.ಎಸ್.ಎಸ್ ಶಾಖೆಯ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಭೂಮಿಪೂಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.

ಸುರಪುರ: ರಾಮಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಕೆಂಭಾವಿ ಜನತೆಯಿಂದ ವಿಶೇಷವಾಗಿ ಶುಭ ಹಾರೈಕೆ

ಈ ಕುರಿತು ದೇಶಪ್ರೇಮಿ ಶಂಕರ್ ಕರಣಗಿ ಮಾತನಾಡಿ, ಅನೇಕ ವರ್ಷಗಳ ನಂತರ ಇಡೀ ಭಾರತೀಯರ ಅಭಿಲಾಷೆಯಂತೆ ನಾಳೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಲಿದ್ದು, ಈ ಸಂದರ್ಭಕ್ಕೆ ಶುಭ ಹಾರೈಸಿ ಕೆಂಭಾವಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಯ ವತಿಯಿಂದ ಪಟ್ಟಣದ ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕೇಸರಿ ಧ್ವಜವನ್ನು ಹಾರಿಸಲಾಗಿದೆ. ಅಲ್ಲದೆ ನಾಳೆ ಕೆಂಬಾವಿ ಪಟ್ಟಣದ ಪ್ರತಿಮನೆಗೂ ಸಿಹಿಯನ್ನು ಹಂಚಿ ಸಂಭ್ರಮವನ್ನು ಆಚರಿಸಲಾಗುವುದು ಎಂದು ಸಂತೋಷದಿಂದ ನುಡಿಯುತ್ತಾರೆ.

ಶ್ರೀ ರಾಮ ಮಂದಿರ ನಿರ್ಮಾಣ ಗುದ್ದಲಿ ಪೂಜೆ ಸಮಾರಂಭಕ್ಕೆ ಕೆಂಭಾವಿ ದೇಶಪ್ರೇಮಿಗಳು ನಡೆಸಿದ ಈ ಆಚರಣೆ ವಿಶೇಷವೆನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.