ETV Bharat / state

ಕಾಣೆಯಾದವ ಆಲಮಟ್ಟಿ ಕಾಲುವೆಯಲ್ಲಿ ಶವವಾಗಿ ಪತ್ತೆ: ಯುವತಿ ವಿಚಾರಕ್ಕೆ ಬಲಿಯಾದನಾ ಯುವಕ? - muddebihala young man death case

ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ತಾಂಡಾ ಬಳಿ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಯುವಕನೊಬ್ಬನ ಶವ ಬುಧವಾರ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ.

young-man-found-dead-in-canal-murder-alligation
ಕಾಣೆಯಾದವ ಆಲಮಟ್ಟಿ ಕಾಲುವೆಯಲ್ಲಿ ಶವವಾಗಿ ಪತ್ತೆ: ಯುವತಿ ವಿಚಾರಕ್ಕೆ ಬಲಿಯಾದನಾ ಯುವಕ?
author img

By

Published : Feb 2, 2022, 10:54 PM IST

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ತಾಂಡಾ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಯುವಕನೊಬ್ಬನ ಶವ ಬುಧವಾರ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ. ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಮೌನೇಶ ಬಸವರಾಜ ಬಡಿಗೇರ (22) ಎಂಬು ಯುವಕನ ಮೃತದೇಹ ಇದಾಗಿದೆ.

ಯುವಕನ ಮೈಮೇಲೆ ಅಲ್ಲಲ್ಲಿ ಮಾರಕಾಸ್ತ್ರಗಳಿಂದ ಇರಿದ ಗಾಯಗಳು ಕಂಡುಬಂದಿದ್ದು, ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

ಯುವಕ ಮೌನೇಶ ಕಾಣೆಯಾಗಿರುವ ಬಗ್ಗೆ ಆತನ ತಂದೆ ಬಸವರಾಜ ಬಡಿಗೇರ ಜನವರಿ 30ರಂದು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೊಲೆ ಆರೋಪ: ಶವ ಪತ್ತೆಯಾದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪಾಲಕರು, ತಮ್ಮ ಮಗನೊಂದಿಗೆ ತಾಳಿಕೋಟೆ ಪಟ್ಟಣದ ದೇವಸ್ಥಾನವೊಂದರ ಆರ್ಚಕನ ಪುತ್ರಿಯೊಬ್ಬಳು ಸಲುಗೆ ಇಟ್ಟುಕೊಂಡಿದ್ದಳು. ಇದೇ ವಿಷಯವಾಗಿ ಹಲವು ಬಾರಿ ಎರಡು ಮನೆಯವರಿಗೂ ಜಗಳ ಆಗಿತ್ತು, ಈಗ ಅವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

young-man-found-dead-in-canal-murder-alligation
ಯುವಕನ ಮೃತದೇಹ

ಈ ವಿಚಾರವಾಗಿ ಯುವತಿಯ ಪಾಲಕರು ನಮ್ಮ ಮಗನ ಮೇಲೆ ಈ ಹಿಂದೆ ಹಲವು ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆಕೆಯ ಬಲವಂತಕ್ಕೆ ನನ್ನ ಮಗ ಬಲಿಯಾಗಿದ್ದಾನೆ. ಇತ್ತೀಚೆಗೆ ಆಕೆಯ ಸಹವಾಸದಿಂದ ದೂರ ಇರಲು ಆತ ಬೆಂಗಳೂರಿಗೆ ಹೋಗಿದ್ದ. ಇದೀಗ ಶವವಾಗಿ ದೊರೆತಿದ್ದು, ಅವಳ ಕಡೆಯವರೇ ಕೊಲೆ ಮಾಡಿದ್ದಾರೆ. ನಮಗೂ ಫೋನ್ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಆಪಾದಿಸಿರುವ ಪೋಷಕರು ನಮಗೆ ಪೊಲೀಸ್ ಭದ್ರತೆ ಕೊಡಿಸಬೇಕುಂದು ಅಂಗಲಾಚಿದ್ದಾರೆ.

ಸದ್ಯ ಯುವಕನ ಕೊಲೆ ಶಂಕೆ ಹಿನ್ನೆಲೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧಾರವಾಡ: ಅಂಗಡಿ ವಿಚಾರವಾಗಿ ಇಬ್ಬರ ನಡುವೆ ಜಗಳ.. ಗನ್ ತೋರಿಸಿ ಬೆದರಿಕೆ ಹಾಕಿದ ಬಿಜೆಪಿ ಮುಖಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.