ETV Bharat / state

ಮುದ್ದೇಬಿಹಾಳ ಮಹಿಳಾ ಪಿಎಸ್​ಐರದ್ದು ಎನ್ನಲಾದ ಆಡಿಯೋ ವೈರಲ್​..

ನಾಲತವಾಡ ಪಟ್ಟಣ ಪಂಚಾಯತ್​ ಚುನಾವಣೆ ಸಂದರ್ಭದಲ್ಲಿ ಪಕ್ಷವೊಂದರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವಂತೆ ಮುದ್ದೇಬಿಹಾಳ ಮಹಿಳಾ ಪಿಎಸ್​ಐವೊಬ್ಬರು ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

woman-psi-audio-viral-in-muddebihala
ಮುದ್ದೇಬಿಹಾಳ ಮಹಿಳಾ ಪಿಎಸ್​ಐರದ್ದು ಎನ್ನಲಾದ ಆಡಿಯೋ ವೈರಲ್
author img

By

Published : Jan 22, 2022, 6:13 PM IST

ಮುದ್ದೇಬಿಹಾಳ: ನಾಲತವಾಡ ಪಟ್ಟಣ ಪಂಚಾಯತ್​ ಚುನಾವಣೆ ಸಂದರ್ಭದಲ್ಲಿನ ಮಹಿಳಾ ಪಿಎಸ್​ಐವೊಬ್ಬರು ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾರಿ ವೈರಲ್​ ಆಗಿದೆ. ಪಕ್ಷವೊಂದರ ಅಭ್ಯರ್ಥಿಯ ಪರವಾಗಿ ಮುದ್ದೇಬಿಹಾಳ ಪಿಎಸ್​ಐ ರೇಣುಕಾ ಜಕನೂರ ಅವರು ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಡಿಯೋದಲ್ಲಿ ಏನಿದೆ: ಆಡಿಯೋದ ಕೊನೆಯಲ್ಲಿ ತಾನು ಮುದ್ದೇಬಿಹಾಳದಿಂದ ಪಿಎಸ್​ಐ ಎಂದು ಹೇಳಿಕೊಂಡಿದ್ದು, ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. 'ನಾಲತವಾಡ ಪಟ್ಟಣ ಪಂಚಾಯತ್​ನ 6ನೇ ವಾರ್ಡ್​ನಲ್ಲಿ ಎಷ್ಟು ವೋಟ್​ಗಳಿವೆ? ಯಾವ ಜಾತಿಯವು ಎಷ್ಟು? ಅದರಲ್ಲಿ ನಾಯಕರು ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಬಳಿಕ ಆ ನಾಯಕನೊಂದಿಗೆ ಪ್ರಚಾರ ನಡೆಸಿ, ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡು ನಿಮ್ಮ ಪರ ಒಲವು ಮೂಡುವಂತೆ ಮಾಡಿಕೊಳ್ಳಿರಿ. ಈ ಎಲ್ಲದರ ಬಗ್ಗೆ ನನಗೆ ಮಾಹಿತಿ ನೀಡಿ. ಒಟ್ಟಿನಲ್ಲಿ ನಿಮ್ಮ ತಾಯಿಯ ಗೆಲುವಿಗೋಸ್ಕರ ಎಲ್ಲ ಪ್ರಯತ್ನ ಮಾಡೋಣ. ಇದು ಯಾರೊಂದಿಗೂ ಹೇಳಿಕೊಳ್ಳುವ ವಿಷಯವಲ್ಲ, ನಮ್ಮ ಸಾಹೇಬರು ಹೀಗೆ ಮಾಡುವಂತೆ ಹೇಳಿದ್ದಾರೆ. ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅವರು ನಮಗೆ ತಿಳಿಸಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ನನಗೆ ತಿಳಿಸಿ' ಎಂದು ಸೂಚಿಸುತ್ತಾರೆ.

ವೈರಲ್​ ಆಡಿಯೋ ಮತ್ತು ಮಹಿಳಾ ಪಿಎಸ್​ಐ ಪ್ರತಿಕ್ರಿಯೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ 'ನೀವು ಯಾರು? ಎಲ್ಲಿಂದ ಕರೆ ಮಾಡುತ್ತಿರುವಿರಿ' ಎಂದು ವ್ಯಕ್ತಿ ಮರು ಪ್ರಶ್ನಿಸಿದ್ದು, 'ನಾನು ಮುದ್ದೇಬಿಹಾಳದಿಂದ ಪಿಎಸ್​ಐ' ಎಂದು ಹೇಳಿಕೊಂಡಿರುವ ಆಡಿಯೋ ಇದಾಗಿದ್ದು, ಸಖತ್​ ವೈರಲ್​ ಆಗಿದೆ.

ಆಡಿಯೋ ಬಗ್ಗೆ ಪಿಎಸ್​ಐ ಪ್ರತಿಕ್ರಿಯೆ: ವೈರಲ್ ಆಡಿಯೋ ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿಗೆ ಪ್ರತಿಕ್ರಿಯೆ ನೀಡಿರುವ ​ಪಿಎಸ್​ಐ ರೇಣುಕಾ ಜಕನೂರ, 'ತಮಗೆ ಯಾವ ಆಡಿಯೋ ಬಗ್ಗೆಯೂ ತಿಳಿದಿಲ್ಲ. ಯಾರ ಜೊತೆಗೂ ಕೂಡ ನಾನು ಮಾತನಾಡಿಲ್ಲ. ಚುನಾವಣೆಯಲ್ಲಿ ಭದ್ರತೆ ಒದಗಿಸುವ ಕರ್ತವ್ಯ ಮಾತ್ರ ನಮ್ಮದಾಗಿದೆ. ಅದನ್ನು ಬಿಟ್ಟು ನಾವೇನು ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಾನು ಸೋತಿದ್ದೇನೆ, ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ?: ಹೆಚ್​ಡಿಕೆಗೆ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.