ETV Bharat / state

'ಕೋಟಿ ವೃಕ್ಷ ಅಭಿಯಾನ' ಕುರಿತು ಸಂವಾದ

ಈ ಯೋಜನೆಯಲ್ಲಿ ನಾನೊಂದು ಸಾಧನ ಮಾತ್ರ. ಎಲ್ಲರೂ ಕೈ ಜೋಡಿಸಿದ ಪರಿಣಾಮ 2016ರಲ್ಲಿ ಆರಂಭಿಸಲಾದ 'ಕೋಟಿ ವೃಕ್ಷ ಅಭಿಯಾನ'ದ ಶ್ರೇಯಸ್ಸು ಅರಣ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಘಗಳಿಗೆ ಸಲ್ಲುತ್ತದೆ ಎಂದರು. ದೇಶದಲ್ಲಿ ರಾಜಸ್ಥಾನದ ಜೈಸಲ್ಮೇರ್ ನಂತರ ವಿಜಯಪುರ ಎರಡನೇ ಅತಿದೊಡ್ಡ ಬರಪೀಡಿತ ಜಿಲ್ಲೆ ಎಂದೇ ಗುರುತಿಸಲಾಗಿದೆ..

Webinar on koti vruksha abhiyan
Webinar on koti vruksha abhiyan
author img

By

Published : Jul 19, 2020, 9:01 PM IST

ವಿಜಯಪುರ : ಜಿಲ್ಲೆಯಾದ್ಯಂತ ಅರಣ್ಯ ಬೆಳೆಸುತ್ತಿರುವ ಮಹತ್ವಾಕಾಂಕ್ಷಿ 'ಕೋಟಿ ವೃಕ್ಷ ಅಭಿಯಾನ'ದ ಯಶಸ್ಸು ಜಿಲ್ಲೆಯ ಸಮಸ್ತ ಸ್ವಯಂ-ಸೇವಾ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಎನ್‌ಸಿಸಿ ಕೆಡೆಟ್‍ಗಳು ಮತ್ತು ಸಾರ್ವಜನಿಕರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎಂ ಬಿ ಪಾಟೀಲ್‌ ತಿಳಿಸಿದರು.

ವೃಕ್ಷ ಅಭಿಯಾನ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲಿ ನಾನು, ಅಧಿಕಾರಿಗಳ ನಿಯಮಿತ ಸಭೆಗಳಲ್ಲಿ ಜಿಲ್ಲೆಯ ಅರಣ್ಯ ಭೂಮಿ ಶೇ.0.17ರಷ್ಟಿದೆ ಎಂಬುದನ್ನು ತಿಳಿದು ದಂಗಾಗಿದ್ದೆ. ಆ ದಿನವೇ ಜಿಲ್ಲೆಯಲ್ಲಿ ಅರಣ್ಯವೃದ್ಧಿಗೆ ಪಣತೊಟ್ಟೆ. ಇದಕ್ಕೆ ಅರಣ್ಯ ಇಲಾಖೆ, ಜಿಲ್ಲಾಡಳಿತ, ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರು ಕೈ ಜೋಡಿಸಿದ್ದಾರೆ.

ಈ ಯೋಜನೆಯಲ್ಲಿ ನಾನೊಂದು ಸಾಧನ ಮಾತ್ರ. ಎಲ್ಲರೂ ಕೈ ಜೋಡಿಸಿದ ಪರಿಣಾಮ 2016ರಲ್ಲಿ ಆರಂಭಿಸಲಾದ 'ಕೋಟಿ ವೃಕ್ಷ ಅಭಿಯಾನ'ದ ಶ್ರೇಯಸ್ಸು ಅರಣ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಘಗಳಿಗೆ ಸಲ್ಲುತ್ತದೆ ಎಂದರು. ದೇಶದಲ್ಲಿ ರಾಜಸ್ಥಾನದ ಜೈಸಲ್ಮೇರ್ ನಂತರ ವಿಜಯಪುರ ಎರಡನೇ ಅತಿದೊಡ್ಡ ಬರಪೀಡಿತ ಜಿಲ್ಲೆ ಎಂದೇ ಗುರುತಿಸಲಾಗಿದೆ. ಈ ಶಾಪವನ್ನು ಹೊಡೆದೋಡಿಸಲು, ರೈತರಲ್ಲಿ ಜಾಗೃತಿ ಮೂಡಿಸಿ ಕೃಷಿ ಕೇಂದ್ರಿತ ವೃಕ್ಷ ಪ್ರಗತಿ ಸಾಧಿಸಲು ಪ್ರಯತ್ನಿಸಲಾಗುತ್ತಿದೆ.

ಇದಕ್ಕಾಗಿ ವೃಕ್ಷಥಾನ್ ಕೂಡ ಆಯೋಜಿಸಿ ಅರಿವು ಮೂಡಿಸಲಾಗುತ್ತದೆ ಎಂದರು. ಅರಣ್ಯ ಅಭಿವೃದ್ಧಿಗೆ ಯುರೋಪ್ ಒಕ್ಕೂಟದ ಮಾದರಿ ನಮ್ಮ ಕಣ್ಮುಂದಿದೆ. ಯೂರೋಪ್‌ನಲ್ಲಿ 2030 ಹೊತ್ತಿಗೆ ಅಂದರೆ ಮುಂದಿನ ಹತ್ತು ವರ್ಷಗಳಲ್ಲಿ 30 ಕೋಟಿ ಸಸಿಗಳನ್ನು ನೆಟ್ಟು ಅರಣ್ಯ ಅಭಿವೃದ್ಧಿ ಪಡಿಸುವ ಗುರಿ ಹೊಂದಿ, ಅದರ ಅನುಸಾರ ಕೆಲಸ ಮಾಡುತ್ತಿದ್ದಾರೆ. ಅದೇ ಮಾದರಿ ನಮ್ಮ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಳವಡಿಸಬೇಕು ಎಂದರು.

ಮುಕ್ಕೋಟಿ ವೃಕ್ಷ ಬೆಳೆಸುವ ಗುರಿ : 2ನೇ ಹಂತದ ಯೋಜನೆಯಲ್ಲಿ ಈವರೆಗೂ ಆಗಿರುವ ಸಣ್ಣ-ಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದು. 2 ರಿಂದ 3 ಕೋಟಿ ವೃಕ್ಷಗಳನ್ನು ಬೆಳೆಸುವ ಮುಕ್ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು. ಈವರೆಗೆ ರೈತರಿಗೆ ನೀಡಲಾಗಿರುವ ಸಸಿಗಳು ಹಾಗೂ ನಂತರದ ಪೋಷಣೆಯನ್ನು ಈಗಾಗಲೇ ದಾಖಲು ಮಾಡಲಾಗುತ್ತಿದೆ. ಇದರಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಮಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಮಾತನಾಡಿ, ಒಂದು ಕಾಲದ ಸಂಪದ್ಭರಿತ ವಿಜಯಪುರ ಜಿಲ್ಲೆ ಇಂದು ಬಡವಾಗಿದೆ. ಇದಕ್ಕೆ ಕಾರಣ ಅರಣ್ಯ ಕೊರತೆ. ಅರಣ್ಯ ಬೆಳೆಸುವ ಮೂಲಕ ಸ್ಥಳೀಯ ಕೈಗಾರಿಕೆ, ಕೃಷಿ ಮತ್ತು ಸಂಸ್ಕತಿ ಸಬಲವಾಗುತ್ತದೆ. ಜಿಲ್ಲೆಯ ಜನರು ಗುಳೆ ಹೋಗುವುದು ನಿಲ್ಲುತ್ತದೆ. ಎಂ ಬಿ ಪಾಟೀಲ್‌ ಕ್ರಿಯಾಶೀಲತೆಯ ಪ್ರತಿಫಲವಾಗಿ ಇಂದು ಜಿಲ್ಲೆಯಾದ್ಯಂತ ಕೋಟಿ ವೃಕ್ಷ ಅಭಿಯಾನ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ. ಇದೊಂದು ಅದ್ಭುತವೇ ಸರಿ ಎಂದು ಪ್ರಶಂಸಿಸಿದರು.

ಹಿರಿಯ ಐಎಫ್‍ಎಸ್ ಅಧಿಕಾರಿ ದೀಪಕ್ ಶರ್ಮಾ ಮಾತನಾಡಿ, ಮಣ್ಣಿನ ಫಲವತ್ತತೆ ಕಾಪಾಡಲು ವೃಕ್ಷಾಭಿಯಾನಕ್ಕೆ ಖಾಸಗಿ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ರೈತರಿಗೆ ಅನುಕೂಲವಾಗುವಂತೆ ಸಸಿಗಳನ್ನು ನೀಡಬೇಕು. ಸಸಿ ವಿತರಣೆಯನ್ನು ಅರಣ್ಯ ಇಲಾಖೆ ಮಾತ್ರವಲ್ಲದೇ ಖಾಸಗಿಯವರೂ ವಹಿಸಿಕೊಳ್ಳುವಂತಾಗಬೇಕು. ಈ ಅಭಿಯಾನ ಸಂಪೂರ್ಣ ಜಿಲ್ಲೆಗೆ ವಿಸ್ತರಣೆಯಾಗಬೇಕು ಎಂಬ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.