ವಿಜಯಪುರ: ಕೊರೊನಾ ಆರ್ಭಟದಿಂದ ಪೊಲೀಸ್ ಇಲಾಖೆ ಸಹ ಭಯದಲ್ಲೇ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಎರಡು ಬಾರಿ ವಿಜಯಪುರದ ವಾಟರ್ ಟ್ಯಾಂಕ್ ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೀಲ್ ಡೌನ್ ಮಾಡಲಾಗಿದೆ. 7-8 ಪೊಲೀಸ್ ಠಾಣೆಗಳು ಸಹ ಸೀಲ್ ಡೌನ್ ಆಗಿವೆ.
ಹಲವು ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್ನಿಂದ ಆಸ್ಪತ್ರೆಗೆ ದಾಖಲಾಗಿ ಮರಳಿ ಕರ್ತವ್ಯದಲ್ಲಿದ್ದಾರೆ. ಅಲ್ಲದೆ ಎಸ್ಪಿ ಅನುಪಮ್ ಅಗರವಾಲ್ ಒಂದು ಬಾರಿ ಹೋಂ ಕ್ವಾರಂಟೈನ್ ಸಹ ಆಗಿದ್ದರು. ಇದೀಗ ಗಂಟಲು ದ್ರವ ಪರೀಕ್ಷೆಗೂ ಒಳಗಾಗಿದ್ದಾರೆ.
ಸೋಮವಾರ ಬಾಗಲಕೋಟೆ ರಸ್ತೆಯಲ್ಲಿರುವ ಎಸ್ಪಿ ನಿವಾಸದಲ್ಲಿ ಸ್ವ್ಯಾಬ್ ಟೆಸ್ಟ್ಗೆ ಒಳಗಾಗಿದ್ದಾರೆ. ಎಸ್ಪಿ ಅನುಪಮ್ ಅಗರ್ವಾಲ್ ಅವರ ನಿವಾಸದ ಉದ್ಯಾನವನದಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಎಸ್ಪಿಯವರ ಗಂಟಲು ದ್ರವ ಪಡೆದುಕೊಂಡರು.