ವಿಜಯಪುರ: ಕೊರೊನಾ ಸೋಂಕು ಕಂಡು ಬರದ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್‌ನಿಂದ ಮುಕ್ತವಾಗಿಸುವಂತೆ ನಾಗರಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೊರೊನಾ ವೈರಸ್ಗೆ ವಿಜಯಪುರ ನಗರವೇ ತತ್ತರಿಸಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಹಲವು ಬಡವಾಣೆಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿತ್ತು. ಇನ್ನೂ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕೊರೊನಾ ಹಾವಳಿಯಿಲ್ಲದ ಪ್ರದೇಶಗಳನ್ನ ಕಂಟೈನ್ಮೆಂಟ್ ನಿಂದ ಮುಕ್ತಗೊಳಿಸುವಂತೆ ಮನವರಿಕೆ ಮಾಡಿದರು.
ಇನ್ನೂ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಬೀದಿ ವ್ಯಾಪಾರ, ಅಂಗಡಿ ಮುಂಗಟ್ಟು ನಂಬಿಕೊಂಡು ಜೀವನ ನಡೆಸುತ್ತಿದ್ದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೇ ಇತರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆ ಹೋಗಲಾಗುತ್ತಿಲ್ಲ. ಹೀಗಾಗಿ ಕೊರೊನಾ ಸೋಂಕು ಹಿಡಿತಕ್ಕೆ ಬಂದ ಪ್ರದೇಶಗಳನ್ನ ಕಂಟೈನ್ಮೆಂಟ್ನಿಂದ ಮುಕ್ತ ಮಾಡುವಂತೆ ವಿಜಯಪುರ ನಗರದ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.