ETV Bharat / state

ಉಜನಿ ಜಲಾಶಯದಿಂದ ನೀರು ಬಿಡುಗಡೆ..ಉಕ್ಕಿ ಹರಿಯುತ್ತಿರುವ ಭೀಮೆ

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಭೀಮಾ ನದಿ ಉಕ್ಕಿ ಹರಿಯುತ್ತಿದೆ.

Overflowing Bhima river
ಉಕ್ಕಿ ಹರಿಯುತ್ತಿರುವ ಭೀಮಾ ನದಿ
author img

By

Published : Aug 13, 2022, 12:56 PM IST

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕರ್ನಾಟಕದ ಭೀಮಾ ನದಿ ಧುಮಿಕ್ಕಿ ಹರಿಯುತ್ತಿದೆ.‌ ಸೊಲ್ಲಾಪುರ ಜಿಲ್ಲೆಯ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇರಿದಂತೆ ನಾನಾ ಬ್ಯಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯಗಳ ಗಡಿಯಲ್ಲಿ ಹರಿಯುವ ಭೀಮಾ ನದಿಗೆ ವಿಜಯಪುರ ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ತಲಾ ನಾಲ್ಕು ಬ್ಯಾರೇಜ್​​ಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ನಿರ್ಮಿಸಿವೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಗ್ರಾಮದ ಮೂಲಕ ಭೀಮಾ ನದಿ ಕರ್ನಾಟಕವನ್ನು ಪ್ರವೇಶ ಮಾಡುತ್ತದೆ. ಈಗ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ಜಿಲ್ಲಾಡಳಿತ ಪ್ರವಾಹ ಮುನ್ನೆಚ್ಚರಿಕೆ ನೀಡಿದೆ.

ಉಕ್ಕಿ ಹರಿಯುತ್ತಿರುವ ಭೀಮಾ ನದಿ

8 ಕಡೆಗಳಲ್ಲಿ ಬ್ಯಾರೇಜ್: ವಿಜಯಪುರ ಜಿಲ್ಲೆಯ ಚಡಚಣ ಮತ್ತು ಇಂಡಿ ತಾಲೂಕಿನ ನಾಲ್ಕು ಕಡೆಗಳಲ್ಲಿ ಒಟ್ಟು 8 ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಗೋವಿಂದಪುರ-ಭಂಡಾರಕವಟೆ, ಉಮರಾಣಿ- ಲವಂಗಿ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬಳಿ ಈ ಬ್ಯಾರೇಜ್ ಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಗೋವಿಂದಪುರ- ಭಂಡಾರಕವಟೆ, ಉಮರಾಣಿ ಲವಂಗಿ, ಚಣೆಗಾಂವ-ಬರೂರ ಮತ್ತು ಹಿಂಗಣಿ-ಅಳ್ಳಗಿ ಬ್ಯಾರೇಜ್​​ಗಳು ಕರ್ನಾಟಕ ವ್ಯಾಪ್ತಿಗೆ ಸೇರಿವೆ. ಉಳಿದ ನಾಲ್ಕು ಬ್ಯಾರೇಜ್​​ ಗಳನ್ನು ಮಹಾರಾಷ್ಟ್ರ ನಿರ್ಮಿಸಿವೆ. ಈಗ ಗೋವಿಂದಪುರ- ಭಂಡಾರಕವಟೆ, ಉಮರಾಣಿ-ಲವಂಗಿ ಬ್ಯಾರೇಜ್​​ಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಿವೆ. ಇನ್ನುಳಿದ ಬ್ಯಾರೇಜ್​​ಗಳತ್ತ ನೀರು ಮುನ್ನುಗ್ಗುತ್ತಿದೆ.

ಜಿಲ್ಲಾಡಳಿತದಿಂದ ಪ್ರವಾಹ ಮುನ್ನೆಚ್ಚರಿಕೆ: ಭೀಮಾ ನದಿಗೆ ಮಹಾರಾಷ್ಟ್ರ ಸರ್ಕಾರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ವಿಜಯಪುರ ಜಿಲ್ಲಾಡಳಿತ ಈಗಾಗಲೇ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಗ್ರಾಮಗಳಲ್ಲಿ ಡಂಗೂರ ಸಾರಲಾಗಿದ್ದು, ಯಾರು ನದಿ ಕಡೆ ತೆರೆಳದಂತೆ ಸೂಚಿಸಿದೆ. ನದಿಗೆ ಬಿಟ್ಟಿರುವ ಮೋಟಾರ್ ಪಂಪ್ ಸೆಟ್​​ಗಳನ್ನು ತೆಗೆದುಕೊಳ್ಳಬೇಕು. ಜಾನುವಾರುಗಳನ್ನು ನದಿ ತಟದಲ್ಲಿ ಬಿಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.

ಇದನ್ನೂ ಓದಿ: ವಿಜಯಪುರ: ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದ ಸಚಿವ, ಶಾಸಕರಿಗೆ ಯುವಕನಿಂದ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.