ವಿಜಯಪುರ: ರಾಮನವಮಿ ಪ್ರಯುಕ್ತ ನಗರದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಖತ್ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು.
ಸಿದ್ದೇಶ್ವರ ದೇಗುಲದಿಂದ ಶಿವಾಜಿ ಚೌಕ್ ವರೆಗೆ ಸಾಗಿದ ಮೆರವಣಿಗೆಯಲ್ಲಿ ವಿವಿಧ ಗೀತೆಗೆ ಶಾಸಕ ಯತ್ನಾಳ್ ಕೈಯಲ್ಲಿ ಕೇಸರಿ ಬಾವುಟ ಹಿಡಿದು ಸ್ಟೆಪ್ ಹಾಕಿದರು.
ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಮ ಭಕ್ತರು ಸೇರಿದ್ದರು. ಅಲ್ಲಲ್ಲಿ ಗೋರಕ್ಷಕ ಶಿವು ಉಪ್ಪಾರ್ ಚಿತ್ರವಿರುವ ಬಾವುಟಗಳು ರಾರಾಜಿಸುತ್ತಿದ್ದವು.