ETV Bharat / state

ವಿಜಯಪುರ: ಯುವಕನ ಆತ್ಮಹತ್ಯೆಗೆ ಕಾರಣನಾದ ಆರೋಪ, ಪಿಎಸ್​​ಐ ಅಮಾನತು - ವಿಜಯಪುರ ಪಿಎಸ್​​ಐ ಅಮಾನತು ಪ್ರಕರಣ

ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ, ಪೊಲೀಸ್​ ಠಾಣೆಗೆ ಕರೆಯಿಸಿ ವಿಚಾರಣೆ ಮಾಡುವ ನೆಪದಲ್ಲಿ ಥಳಿಸಿ ಆತ್ಮಹತ್ಯೆಗೆ ಕಾರಣರಾದ ಆರೋಪದ ಮೇಲೆ ಪಿಎಸ್​​ಐ ಅಮಾನತುಗೊಂಡಿದ್ದಾರೆ.

vijayapur-apmc-police-station-psi-suspended
ವಿಜಯಪುರ: ಯುವಕನ ಆತ್ಮಹತ್ಯೆಗೆ ಕಾರಣನಾದ ಆರೋಪ, ಪಿಎಸ್​​ಐ ಅಮಾನತು
author img

By

Published : Jul 15, 2022, 7:31 AM IST

ವಿಜಯಪುರ: ಯುವಕನೊಬ್ಬನ ಮೇಲೆ ಕಳ್ಳತನ ಆರೋಪ ಹೊರಿಸಿ, ಆತನನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡುವ ನೆಪದಲ್ಲಿ ಥಳಿಸಿ ಆತ್ಮಹತ್ಯೆಗೆ ಕಾರಣರಾದ ಆರೋಪದ ಮೇಲೆ ಪಿಎಸ್​​ಐವೊಬ್ಬರನ್ನು ಅಮಾನತು ಮಾಡಲಾಗಿದೆ. ಇಲ್ಲಿನ ಎಪಿಎಂಸಿ ಠಾಣೆ ಪಿಎಸ್​​ಐ ಸೋಮೇಶ ಗೆಜ್ಜಿ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್​​ ಈ ಆದೇಶ ಹೊರಡಿಸಿದ್ದಾರೆ. ಕೆಲ ದಿನಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಸೋಮಶೇಖರ ನಾಗಮೋತಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೂ ಮುನ್ನ ಯುವಕ ಸೋಮಶೇಖರ, ತಮ್ಮ ಸಹೋದರನ ಕಾರಿನಲ್ಲಿದ್ದ ಹಣ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಪಿಎಸ್​​ಐ ಸೋಮೇಶ ದೂರು ದಾಖಲಿಸಿಕೊಂಡು ಠಾಣೆಗೆ ಕರೆಯಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಲ್ಲದೆ, ಘಟನೆಯಿಂದ ಮನನೊಂದ ಸೋಮಶೇಖರ ವಿಡಿಯೋ ಸಂದೇಶ ಹಾಗೂ ಡೆತ್​​ನೋಟ್ ಬರೆದಿಟ್ಟು ಕೊಲ್ಹಾರದ ಬಳಿ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಿಎಸ್​ಐ ಸೋಮೇಶ ಗೆಜ್ಜಿ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಎಸ್​ಪಿ ಆನಂದಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಲಿಂಗಕಾಮಿಗಳ ನಡುವೆ ಕಿರಿಕ್ : ಕತ್ತು ಹಿಸುಕಿ ಹತ್ಯೆ ಮಾಡಿದ ಆರೋಪದಡಿ ಲ್ಯಾಬ್ ಟೆಕ್ನಿನಿಷಿಯನ್​ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.