ETV Bharat / state

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿ.. ಜನರ ಬೇಸರ - ಸಂಸದ ರಮೇಶ ಜಿಗಜಿಣಗಿ

ಮಂದಗತಿಯಲ್ಲಿ ಸಾಗಿದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ- ಏಕಕಾಲಕ್ಕೆ ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ನಿರೀಕ್ಷೆ ಹುಸಿ- ಜನರ ಬೇಸರ

Vijayapur Airport Works
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ
author img

By

Published : Feb 13, 2023, 6:49 AM IST

Updated : Feb 13, 2023, 6:57 AM IST

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿ

ವಿಜಯಪುರ: ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿ ಆಗಿರುವ ಆದಿಲ್ ಶಾಹಿಗಳ ನಗರ ವಿಜಯಪುರ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಬಹುದಿನದ ಕನಸಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ. ಆದರೆ ಶಿವಮೊಗ್ಗದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದ್ದು, ವಿಜಯಪುರ ಏರ್​ಪೋರ್ಟ್​ ಬಗ್ಗೆ ಏಕೆ ತಾತ್ಸಾರ ಎಂಬುದು ಜನರ ಪ್ರಶ್ನೆಯಾಗಿದೆ.

ಬಿಜೆಪಿ ಸರ್ಕಾರ ಚುನಾವಣೆಗೆ ಹೋಗುವ ಮುನ್ನವೇ ಶತಾಯಗತಾಯ ಫೆಬ್ರವರಿ ಕೊನೆಯ ತಿಂಗಳದ ವೇಳೆಗೆ ವಿಮಾನಗಳ ಹಾರಾಟ ನಡೆಸಲು ತೀರ್ಮಾನಿಸಿತ್ತು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಉದ್ಘಾಟನೆ ಮತ್ತಷ್ಟು ದೂರ ಹೋಗುವ ಸಾಧ್ಯತೆಯಿದೆ. 14 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬುರಣಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವಿಮಾನ ನಿಲ್ದಾಣಕ್ಕಾಗಿ 100 ಎಕರೆ ಭೂಮಿ ವಶಕ್ಕೆ ಸರ್ಕಾರ ಹತ್ತು ವರ್ಷ ತೆಗೆದುಕೊಳ್ಳಬೇಕಾಯಿತು. ಕೊನೆಗೆ 2008 ರಲ್ಲಿ ಅಂದಿನ ಸಿ ಎಂ ಯಡಿಯೂರಪ್ಪ ವಿಜಯಪುರ ಜತೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.‌

ಎರಡು ಹಂತದಲ್ಲಿ ನಿರ್ಮಾಣ: ಕಾಮಗಾರಿ ಶುರುವಾಗಿ 15 ವರ್ಷ ಕಳೆದರೂ ಇದುವರೆಗೂ ಮುಗಿದಿಲ್ಲ. 347.92 ಕೋಟಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿಗೆ 222.92 ಕೋಟಿ, ಎರಡನೇ ಹಂತದ ಕಾಮಗಾರಿಗೆ 125 ಕೋಟಿ ರೂ.‌ನಿಗದಿ ಮಾಡಲಾಗಿತ್ತು.

ATR -72 ವಿಮಾನ ಹಾರಾಟಕ್ಕಾಗಿ 95 ಕೋಟಿ, AIRBUS-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೆಗೆ ಏರಿಸಲು ಹೆಚ್ಚುವರಿ ಮೊತ್ತ 127.92 ಕೋಟಿ ನೀಡಲಾಗಿದೆ. ಇದರೊಂದಿಗೆ ಮೊದಲನೇ ಹಂತದಲ್ಲಿ ರನ್ ವೇ, ಟ್ಯಾಕ್ಸಿ ವೇ, ಒಳರಸ್ತೆ, ಕೂಡು ರಸ್ತೆ, ಪೆರಿಪೆರಲ್ ಇತರೆ ರಸ್ತೆ ಕಾಮಗಾರಿ ಅಭಿವೃದ್ಧಿ ಮಾಡಲಾಗುತ್ತಿದೆ. ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ಏಕಕಾಲಕ್ಕೆ ನಡೆಯೋ ನಿರೀಕ್ಷೆ ಜನರಲ್ಲಿತ್ತು. ಆದರೆ ಅದು ಹುಸಿಯಾಗಿದೆ.

ಪ್ರಯಾಣಿಕರಿಗೆ ಸೇವೆ: ಆರಂಭದಲ್ಲಿ ಕೇವಲ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನಗಳ ಸೇವೆ ಮಾತ್ರ ಸಿಗುತ್ತದೆ ಎಂಬ ಕಾರಣದಿಂದ ಜಿಲ್ಲೆಯ ಜನರು ಇದಕ್ಕೆ ವಿರೋಧ ಮಾಡಿದ್ದರು. ಶಿವಮೊಗ್ಗದ ಮಾದರಿ ಏರ್ ಬಸ್ ವಿಮಾನಗಳು, ಕಾರ್ಗೋ ವಿಮಾನಗಳ ಸೇವೆಯೂ ಸಿಗಬೇಕೆಂದು ಒತ್ತಾಯ ಮಾಡಿದ್ದರು.

ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯೋ ಪ್ರದೇಶದಲ್ಲಿ ಏರ್​ಬಸ್ ಹಾಗೂ ಕಾರ್ಗೋ ವಿಮಾನಗಳ ಸೇವೆ ಸಿಕ್ಕರೆ ಇಲ್ಲಿನ ತೋಟಗಾರಿಕಾ ಉತ್ಪನ್ನಗಳನ್ನು ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಇತರೆ ರಾಜ್ಯ ಹಾಗೂ ದೇಶಗಳಿಗೆ ಕಳುಹಿಸಲು ಅನಕೂಲವಾಗುತ್ತದೆ ಎಂಬುದು ಜಿಲ್ಲೆಯ ಜನರು ಆಗ್ರಹವಾಗಿದೆ. ಜನರ ಒತ್ತಾಯಕ್ಕೆ ಮಣಿದ ಸರ್ಕಾರ ಹೆಚ್ಚುವರಿ ಹಣ ಇಲ್ಲಿ ಇತರೆ ವಿಮಾನಗಳ ಸೇವೆಯೂ ದೊರಕುವಂತೆ ಮಾಡಿದೆ.

ಸಚಿವರು, ಸಂಸದರ ಆಸಕ್ತಿ : ವಿಜಯಪುರದಲ್ಲಿ ವಿಮಾನ‌ ನಿಲ್ದಾಣ ನಿರ್ಮಿಸಬೇಕು ಎನ್ನುವುದು ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರ ಆಸಕ್ತಿಯ ಫಲವಾಗಿದೆ. ಇದಕ್ಕಾಗಿ ಖುದ್ದು ಮುತುವರ್ಜಿ ವಹಿಸಿ ಪದೇ ಪದೆ ಇವರಿಬ್ಬರು ಕಾಮಗಾರಿ ಪ್ರಗತಿ ವೀಕ್ಷಣೆ ಮಾಡುತ್ತಲೇ ಇದ್ದಾರೆ. ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಸಾಧ್ಯವಾಗದಿರಬಹುದು. ಇತ್ತೀಚಿಗೆ ಕಾಮಗಾರಿ ವೀಕ್ಷಿಸಿದ್ದ ಕಾರಜೋಳ ಫೆಬ್ರವರಿ ಮೂರನೇ ವಾರ ಅಥವಾ ಶೀಘ್ರ ಲೋಕಾರ್ಪಣೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಇಚ್ಛಾಶಕ್ತಿ: ಶಿವಮೊಗ್ಗ ವಿಚಾರದಲ್ಲಿ ಮಾಜಿ ಸಿ ಎಂ ಬಿ ಎಸ್​ ಯಡಿಯೂರಪ್ಪ, ಸಂಸದ ಬಿ‌ ವೈ ರಾಘವೇಂದ್ರ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಅಗತ್ಯ ಅನುದಾನ ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಇದೇ ಫೆ. 27ರಂದು ಪ್ರಧಾನಿ‌ ಮೋದಿ ಮೂಲಕ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಅದರಂತೆ ವಿಜಯಪುರದ ಏರ್​ಪೋರ್ಟ್​ ಸಹ ಶೀಘ್ರದಲ್ಲಿ ಲೋಕಾರ್ಪಣೆ ಆಗಲಿ ಅನ್ನುವುದು ಈ ಭಾಗದ ಜನರ ಆಶಯವಾಗಿದೆ.

ಇದನ್ನೂಓದಿ:ಏರ್ ಶೋ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ

Last Updated : Feb 13, 2023, 6:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.