ವಿಜಯಪುರ: ಕೊರೊನಾ ರೋಗಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿಡಿಯೋ ಸಂವಾದದ ಮೂಲಕ ಯೋಗಕ್ಷೇಮ, ಚಿಕಿತ್ಸಾ ಕ್ರಮಗಳ ಕುರಿತು ಇಂದು ಪರಿಶೀಲನೆ ನಡೆಸಿದರು.
ನಗರದ ಹೊರವಲಯದಲ್ಲಿರುವ ಅಕ್ಕ ಮಹಾದೇವಿ ವಿವಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿಡಿಯೋ ಕಾಲ್ ಮಾಡಿ ರೋಗಿಗಳ ಆರೋಗ್ಯ ಹಾಗೂ ಆಸ್ಪತ್ರೆಯಲ್ಲಿರುವ ಸೌಲಭ್ಯ ಮತ್ತು ವೈದ್ಯರು ಕೈಗೊಂಡ ಕ್ರಮಗಳ ಕುರಿತಾಗಿ ಸಂವಾದ ನಡೆಸಿದರು.
ಕೊರೊನಾ ಭಯಾನಕ ವೈರಸ್ ಅಲ್ಲ, ಯಾರೂ ಭಯಪಡಬೇಕಿಲ್ಲ. ಏನೇ ತೊಂದರೆಗಳಿದ್ದರು ನಮಗೆ ತಿಳಿಸಿ, ತಾವುಗಳು ಅಧಿಕಾರಿಗಳ ಜೊತೆಗೆ ಸೇರಿಕೊಂಡು ಸಮಸ್ಯೆಗೆ ಪರಿಹಾರ ನೀಡುವುದಾಗಿ ಸೋಂಕಿತರಿಗೆ ಸಚಿವರು ಧೈರ್ಯ ತುಂಬಿದರು. 10ಕ್ಕೂ ಅಧಿಕ ರೋಗಿಗಳಿಗೆ ವಿಡಿಯೋ ಕರೆ ಮಾಡುವ ಮೂಲಕ ಆಸ್ಪತ್ರೆಯಲ್ಲಿನ ಸೌಲಭ್ಯ ಕುರಿತು ವಿಚಾರಿಸಿದರು. ಈ ವೇಳೆ ಕೆಲವರು ಆಸ್ಪತ್ರೆಯಲ್ಲಿನ ಅನಾನುಕೂಲತೆ ಕುರಿತು ಮನವರಿಕೆ ಮಾಡಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ತಕ್ಷಣ ಪರಿಹಾರ ನೀಡುವುದಾಗಿ ಕೊರೊನಾ ಪೀಡತರಿಗೆ ಬರವಸೆ ನೀಡಿದರು.
ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ, ಜಿಲ್ಲಾ ಪಂಚಾಯತ್ ಸಿಇಒ ಗೋವಿಂದ ರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್ ಸೇರಿದಂತೆ ಹಿರಿಯ ಆರೋಗ್ಯಾಧಿಕಾರಿಗಳು ಭಾಗಿಯಾಗಿದ್ದರು.