ವಿಜಯಪುರ: ಇಲ್ಲಿನ ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ವೇಗದ ಕುರಿತು ಅಸಮಾಧಾನ ಹೊರ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಅಧಿಕಾರಿಯೊಬ್ಬರಿಗೆ ಕೆಟ್ಟ ಪದ ಬಳಕೆ ಮಾಡಿದ್ದಾರೆ.
ಬುರಣಾಪುರ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಭೇಟಿ ನಿಗದಿ ಆಗದಿದ್ದರೂ ಸಹ ಸಚಿವರು ಅನಿರೀಕ್ಷಿತವಾಗಿ ಭೇಟಿ ನೀಡಿ ಪ್ರಗತಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ಕೆಲಸ ಯಾವಾಗ ಮುಗಿಯುತ್ತದೆ? ಎಂದು ಪಿಡ್ಲ್ಯೂಡಿ ಇಲಾಖೆ ಎಇಇಯನ್ನು ಪ್ರಶ್ನಿಸಿದರು. ಸಚಿವರಿಗೆ ಮಾಹಿತಿ ನೀಡಿದ ಪಿಡ್ಲ್ಯೂಡಿ ಇಲಾಖೆ ಇಂಜನಿಯರ್ ಎಇಇ ಸಿ.ಬಿ.ಚಿಕ್ಕಲಗಿ, ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯಲ್ಲ, ಮುಂದಿನ ಮಾರ್ಚ್‌ವರೆಗೂ ಆಗಬಹುದು ಎಂದಾಗ ಸಚಿವ ಕತ್ತಿ ಪ್ರತಿ ವಾದಿಸಿದರು.
ಒಂದು ವೇಳೆ ಡಿಸೆಂಬರ್ಗೆ ಕಾಮಗಾರಿ ಮುಗಿಸಿದರೆ ಹೂ ಮಾಲೆ ಹಾಕುತ್ತೇನೆ, ಇಲ್ಲವಾದರೆ ಬೂಟ್ನಿಂದ ಹೊಡೆಯುತ್ತೇನೆಂದು ಹಾಸ್ಯಭರಿತವಾಗಿಯೇ ಕಾಮಗಾರಿ ಶೀಘ್ರಗೊಳಿಸುವಂತೆ ಸೂಚಿಸಿದರು. ಇದಕ್ಕೆ ನಗುತ್ತಲೇ ಅಧಿಕಾರಿಗಳು ಸುಮ್ಮನಿದ್ದರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ, ಎಸ್ಪಿ ಆನಂದಕುಮಾರ ಹಾಗೂ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ನಾನು ಸಿಎಂ ರೇಸ್ನಲ್ಲಿಲ್ಲ: ಸಚಿವ ಎಸ್ ಟಿ ಸೋಮಶೇಖರ್