ವಿಜಯಪುರ: ದುರಸ್ಥಿ ಕಾರ್ಯ ಮಾಡುವ ವೇಳೆ ಅವಘಡ ಸಂಭವಿಸಿದ್ದು, ಜೆಸಿಬಿ ಯಂತ್ರದಲ್ಲಿ ಸಿಲುಕಿ ಓರ್ವ ಚಾಲಕ ಹಾಗೂ ಓರ್ವ ಪೌರ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಗರದ ಇಂಡಿ ರಸ್ತೆ ಬಳಿಯ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ಈ ಘಟನೆ ಜರುಗಿದೆ. ದುರಸ್ಥಿ ಕಾರ್ಯದ ಸಂದರ್ಭದಲ್ಲಿ ಜೆಸಿಬಿ ಯಂತ್ರದಲ್ಲಿ ಸಿಲುಕಿದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.
![ಜೆಸಿಬಿಯಲ್ಲಿ ಸಿಲುಕಿ ಇಬ್ಬರು ಸಾವು](https://etvbharatimages.akamaized.net/etvbharat/prod-images/13007058_ds.jpg)
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಘಟಕದಲ್ಲಿ ಜೆಸಿಬಿ ಡೋಸರ್ನ ಹೈಡ್ರಾಲಿಕ್ನಲ್ಲಿ ಸಿಲುಕಿ ರಫಿಕ್ (35) ಹಾಗೂ ಅಯುಬ್ (50) ಮೃತಪಟ್ಟಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದ 'ಧಾರವಾಡಿ ಎಮ್ಮೆ' ತಳಿಗೆ ರಾಷ್ಟ್ರಮಟ್ಟದ ಮಾನ್ಯತೆ