ವಿಜಯಪುರ : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಈಗ ಹೆಚ್ಚು ಆದಾಯ ತರುತ್ತಿದೆ. ಲಾಕ್‌ಡೌನ್ ತೆರವಿನ ಬಳಿಕ ಕೈಗೊಂಡ ಕ್ರಮಗಳು ವರ್ಕೌಟ್ ಆಗಿವೆ. ನಗರ ಸಾರಿಗೆ ಬಸ್‌ಗಳಲ್ಲಿ ಕಳೆದ ಎರಡು ತಿಂಗಳಿಂದ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣ ಮಾಡ್ತಿರೋದಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪುಲ್ ಖುಷ್ ಆಗಿದ್ದಾರೆ.
ಲಾಕ್‌ಡೌನ್ ಇದ್ರೂ ಕಳೆದ ವರ್ಷಕ್ಕಿಂತ ಈ ಸಾರಿ ಹೆಚ್ಚಿನ ಪ್ರಮಾಣದ ಆದಾಯ ಬಂದಿದೆ. ಕೊರೊನಾ ಭೀತಿಯಿಂದ ನಷ್ಟ ಅನುಭವಿಸುತ್ತಿದ್ದ ಸಾರಿಗೆ ಸಂಸ್ಥೆಗೆ ನಗರ ಸಾರಿಗೆ ಬಸ್‌ಗಳ ಓಡಾಟದಿಂದ ಲಾಭಾಂಶ ಹೆಚ್ಚಳಗೊಂಡಿದೆ.
ಕಳೆದ ಎರಡ್ಮೂರು ತಿಂಗಳಿಂದ ಜನ ವಿಜಯಪುರದಲ್ಲಿ ಹೆಚ್ಚಾಗಿ ಓಡಾಟಕ್ಕೆ ನಗರ ಸಾರಿಗೆ ಅವಲಂಭಿಸಿದ್ದಾರೆ. ಹೀಗಾಗಿ, ಕಳೆದ ವರ್ಷ (2019) 50 ಬಸ್‌ಗಳು ನಗರದಲ್ಲಿ ಓಡಾಟ ನಡೆಸಿದಾಗ ಪ್ರತಿ ಕಿ.ಮೀಗೆ 25.28 ರೂಪಾಯಿ ಆದಾಯ ನಗರ ಸಾರಿಗೆಯಿಂದ ಬರ್ತಿತ್ತು. ಇದೇ ವರ್ಷ ಲಾಕ್‌ಡೌನ್ ಸಡಿಲಿಕೆ ಮಾಡಿದ ಮೇಲೆ ನಗರ ಸಾರಿಗೆ ಆದಾಯ ಪ್ರತಿ ಕಿ.ಮೀಗೆ 27.97 ರೂ. ಬರ್ತಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಪ್ರತಿ ಕಿ.ಮೀ ಗೆ 10.6 ರೂ. ಆದಾಯ ಹೆಚ್ಚಳಗೊಂಡಿರೋದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುವಂತಾಗಿದೆ.
ನಗರದಲ್ಲಿ ಕೊರೊನಾ ಹೆಚ್ಚಿರುವುದರಿಂದ ನಗರ ಸಾರಿಗೆ ಬಸ್‌ಗಳಿಗೆ ಸ್ಯಾನಿಟೈಸರ್ ರಾಸಾಯನಿಕ ದ್ರಾವಣ ಸಿಂಪಡಣೆ ಜೊತೆಗೆ ಸಿಬ್ಬಂದಿ ಜಾಗೃತಿ ಕ್ರಮಗಳು ಇಂದು ಲಾಭಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ನಗರ ಸಾರಿಗೆ ಆದಾಯ ಹೆಚ್ಚಳಗೊಂಡಿರೋದಕ್ಕೆ ಸಾರ್ವಜನಿಕರು ಕೂಡ ಸಂತಸಗೊಂಡಿದ್ದಾರೆ. ಬಸ್ ಪ್ರಯಾಣಕ್ಕೆ ಬರುವ ಜನರಿಗೆ ಕಡ್ಡಾಯ ಮಾಸ್ಕ್ ಜಾರಿ ಮಾಡುವುದರ ಜೊತೆಗೆ ಇನ್ನೂ ಹೆಚ್ಚು ಬಸ್ ಬಿಡುವಂತೆ ಅಧಿಕಾರಿಗಳಿಗೆ ಒತ್ತಾಯಿಸ್ತಿದ್ದಾರೆ.