ETV Bharat / state

ನವರಾತ್ರಿ ಹಬ್ಬದ ನಿಮಿತ್ತ ಮಂಗಳಮುಖಿಯರಿಗೆ ಬಾಗಿನ - ನವರಾತ್ರಿ ಹಬ್ಬದ ನಿಮಿತ್ತ ಮಂಗಳಮುಖಿಯರಿಗೆ ಬಾಗಿನ

ಮುದ್ದೇಬಿಹಾಳದ ತಂಗಡಗಿ ಗ್ರಾಮದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಜೋಗತಿಯವರೊಂದಿಗೆ ಮಂಗಳಮುಖಿಯರಿಗೂ ಉಡಿ ತುಂಬುವ ಕಾರ್ಯಕ್ರಮ ಮಾಡಲಾಗಿದೆ.

transgenders-performed-navaratri-pooja at-muddebihal
ನವರಾತ್ರಿ ಹಬ್ಬದ ಅಂಗವಾಗಿ ಮಂಗಳಮುಖಿಯರಿಗೆ ಬಾಗೀನ
author img

By

Published : Sep 26, 2022, 10:53 PM IST

ಮುದ್ದೇಬಿಹಾಳ (ವಿಜಯಪುರ): ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಂಗಳಮುಖಿಯರಿಗೆ ಹಾಗೂ ಜೋಗತಿಯರಿಗೆ ನವರಾತ್ರಿ ಆಚರಣೆ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ ತಂಗಡಗಿ ಗ್ರಾಮದಲ್ಲಿ ನಡೆದಿದೆ.

ತಂಗಡಗಿ ಗ್ರಾಮದ ದುರ್ಗಾದೇವಿ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾದೇವಿ ಆರಾಧಕ ಶಾಂತಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳಮುಖಿಯರಿಗೆ ಉಡಿ ತುಂಬುವ ಕಾರ್ಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 900ಕ್ಕೂ ಹೆಚ್ಚು ಜೋಗತಿಯರು ಭಾಗವಹಿಸಿದ್ದರು. ಜೊತೆಗೆ ನೂರಕ್ಕೂ ಅಧಿಕ ಮಂಗಳಮುಖಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀ, ದೇವಿಯ ಆರಾಧಕ ಶಾಂತಪ್ಪ ಪೂಜಾರಿ, ಮುತ್ತಪ್ಪ ಪೂಜಾರಿ, ಸಂಗಣ್ಣ ಅಳ್ಳಗಿ, ನಾಟಕ ಕೃತಿ ರಚನೆಕಾರ ರಮೇಶ ಲಿಂಗದಳ್ಳಿ, ಜಗದೀಶ ಗೋನಾಳ, ಶಿಕ್ಷಕ ಕೆ.ಬಿ.ಕೊಂಗಲ್, ಯುವ ಮುಖಂಡ ಬಸವರಾಜ ನಿಡಗುಂದಿ, ಮಂಜುನಾಥ ಪೂಜಾರಿ,ಪ್ರಶಾಂತ ತಳವಾರ ಮೊದಲಾದವರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ದಾನ ನೀಡಿದ ದಾನಿಗಳನ್ನು ಸನ್ಮಾನಿಸಿಲಾಯಿತು.

ಇದನ್ನೂ ಓದಿ :ಅಪರೂಪದ ಚಿಟ್ಟೆ ಅಟ್ಲಾಸ್​ ಬಿಹಾರದಲ್ಲಿ ಪತ್ತೆ.. ವನದೇವಿಯೆಂದು ಪೂಜೆ ಮಾಡಿದ ಜನರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.