ಮುದ್ದೇಬಿಹಾಳ (ವಿಜಯಪುರ): ಅನ್ಯ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಹಾಗೂ ಅನಾರೋಗ್ಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ನಡೆಯುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿಡಿಪಿಐ ಸಿ.ಪ್ರಸನ್ನಕುಮಾರ ತಿಳಿಸಿದರು.
ಎಂ.ಜಿ.ಎಂ.ಕೆ ಪರೀಕ್ಷಾ ಕೇಂದ್ರದೊಳಗಡೆ ಪ್ರವೇಶಿಸುವ ಮುನ್ನ ಡಿಡಿಪಿಐ ಸಿ.ಪ್ರಸನ್ನಕುಮಾರ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿಕೊಂಡರು. ಇದೇ ವೇಳೆ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಕೈಗಳಿಗೆ ಸ್ಯಾನಿಟೈಸರ್ ಹಾಕಿಸಿಕೊಂಡರು. ಇದಾದ ಬಳಿಕ ತಮ್ಮಲ್ಲಿದ್ದ ಮೊಬೈಲ್‌ನ್ನು ಮೊಬೈಲ್ ಅಧಿಕಾರಿಯ ಕೈಗೊಪ್ಪಿಸಿ ಪರೀಕ್ಷೆ ಕೇಂದ್ರದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ 121 ಪರೀಕ್ಷಾ ಕೇಂದ್ರಗಳಲ್ಲಿ 36,127 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇಂದು ಸಮಾಜ ವಿಜ್ಞಾನ ಪರೀಕ್ಷೆ ನಡೆದಿದ್ದು ಕಂಟೇನ್ಮೆಂಟ್ ಝೋನ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ನಿಗದಿ ಮಾಡಿದ್ದೇವೆ ಎಂದರು.
ಪರೀಕ್ಷಾ ಕೇಂದ್ರದ ಅಧೀಕ್ಷಕಿ ಎನ್.ಬಿ.ತೆಗ್ಗಿನಮಠ, ಜಾಗೃತದಳದ ಅಧಿಕಾರಿ ಬಿ.ಎಸ್.ಲಮಾಣಿ ಹಾಗು ಮತ್ತಿತರು ಜೊತೆಗಿದ್ದರು.