ETV Bharat / state

ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ - ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ

ವಿಜಯಪುರ ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದ್ದು,ಈ ಸೇತುವೆ ಮೇಲೆ ಬಸ್ ಚಲಾಯಿಸಿ ಸರ್ಕಾರಿ ಬಸ್ ಚಾಲಕ ದುಸ್ಸಾಹಸ ಮೆರೆದಿದ್ದಾನೆ.

the-driver-who-drove-the-bus-into-the-sunken-bridge
ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ
author img

By

Published : Aug 6, 2022, 10:22 AM IST

ವಿಜಯಪುರ : ಭಾರಿ ಮಳೆಯಿಂದಾಗಿ ಮುಳುಗಡೆಯಾಗಿದ್ದ ಸೇತುವೆ ಮೇಲೆ ಸರ್ಕಾರಿ ಬಸ್ ಚಾಲಕನೊಬ್ಬ ಬಸ್ ಚಲಾಯಿಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸೇತುವೆಯಲ್ಲಿ ನಡೆದಿದೆ.

ಇಲ್ಲಿನ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆಯ ಮೇಲೆ ಬಸ್ ಚಲಾಯಿಸಬೇಡ ಎಂದು ಗ್ರಾಮಸ್ಥರು ಹೇಳಿದರೂ ಬಸ್ ಚಾಲಕ ಅದನ್ನು ಲೆಕ್ಕಿಸದೇ ಬಸ್ ಚಲಾಯಿಸಿ ದುಸ್ಸಾಹಸ ಮೆರೆದಿದ್ದಾನೆ. ಒಂದು ಹಂತದಲ್ಲಿ ಬಸ್ ನದಿಗೆ ವಾಲಿದ್ದು,ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಈ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ

ಮಳೆ ಕಡಿಮೆಯಾದರೂ ತಗ್ಗದ ಪ್ರವಾಹ : ಜಿಲ್ಲೆಯಲ್ಲಿ ಮಳೆ ತಗ್ಗಿದರೂ ನದಿ ಪ್ರವಾಹ ಮಾತ್ರ ತಗ್ಗಿಲ್ಲ.ಇಲ್ಲಿನ ತಿಕೋಟಾ ಬಬಲೇಶ್ವರ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಡೋಣಿ ನದಿಯ ಅಬ್ಬರ ಜೋರಾಗಿದೆ. ಇದರಿಂದಾಗಿ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದ ಸಂಪರ್ಕ ಕಡಿತ ಗೊಂಡಿದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ಬದಿಯ ರಸ್ತೆಗಳು ಜಲಾವೃತವಾಗಿದೆ. ತುರ್ತು ಕೆಲಸಕ್ಕಾಗಿ ಗ್ರಾಮಸ್ಥರು ಜೀವ ಪಣಕ್ಕಿಟ್ಟು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಓದಿ : ಕುಂಚೇನಹಳ್ಳಿ ಕೆರೆ ತುಂಬಿ ಮನೆಗಳು ಜಲಾವೃತ: ಅಧಿಕಾರಿಗಳಿಗೆ ಶಾಪ ಹಾಕಿದ ಗ್ರಾಮಸ್ಥರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.