ವಿಜಯಪುರ : ಕೊರೊನಾ ಭೀತಿ ಹಿನ್ನೆಲೆ ಶಾಲೆ ಆರಂಭಿಸಲು ಹಿಂಜರಿಯುತ್ತಿದ್ದ ರಾಜ್ಯ ಸರ್ಕಾರ ಕೊನೆಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದಿನಿಂದ ಶಾಲೆ ಆರಂಭಿಸಿದೆ. ಆದರೆ, ಕೊರೊನಾ ನಿಯಮಾವಳಿಗಳು ಮಾತ್ರ ಅಷ್ಟಾಗಿ ಪಾಲನೆ ಆಗುತ್ತಿಲ್ಲ.
ನಗರದ ದರಬಾರ್ ಹೈಸ್ಕೂಲ್ನಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಶಾಲೆ ಆವರಣದಲ್ಲಿ ಸುತ್ತಾಡುತ್ತಿರುವ ದೃಶ್ಯ ಕಂಡು ಬಂತು. ಶಾಲೆಯ ಕೊಠಡಿಯಲ್ಲಿ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಕಾಲೇಜುಗಳಲ್ಲಿ ನಾಮಕಾವಸ್ತೆ ಕೊರೊನಾ ನಿಯಮಾವಳಿ ಪಾಲಿಸಲಾಗುತ್ತಿತ್ತು.
ಓದಿ:ವಿಜಯಪುರ; ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಶಾಲೆಗಳು ಪುನಾರಂಭ
ಕಾಲೇಜು ಆವರಣಗಳಲ್ಲಿ ಗುಂಪುಗೂಡಿ ವಿದ್ಯಾರ್ಥಿಗಳು ನಿಲ್ಲುತ್ತಿದ್ದರೂ ಇದನ್ನು ನೋಡಿದ ಆಡಳಿತ ಮಂಡಳಿ, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದರು.