ETV Bharat / state

ಮುದ್ದೇಬಿಹಾಳ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೂರು ಮೀಟರ್ ಉದ್ದದ ನಾಡಧ್ವಜ ಮೆರವಣಿಗೆ - ನೂರು ಮೀಟರ್ ನಾಡಧ್ವಜ ಮೆರವಣಿಗೆ

ಪಟ್ಟಣದ ಶರಣು ಬೂದಿಹಾಳಮಠ ಫೌಂಡೇಶನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಸಹಯೋಗದಲ್ಲಿ ಸಾರಿಗೆ ಬಸ್‌ಗಳನ್ನು ಹೂವಿನಿಂದ ಅಲಂಕೃತಗೊಳಿಸಿ ಬೈಕ್ ರ‍್ಯಾಲಿ ನಡೆಸಲಾಯಿತು..

ನೂರು ಮೀಟರ್ ಉದ್ದದ ನಾಡಧ್ವಜ ಮೆರವಣಿಗೆ
ನೂರು ಮೀಟರ್ ಉದ್ದದ ನಾಡಧ್ವಜ ಮೆರವಣಿಗೆ
author img

By

Published : Nov 1, 2021, 7:35 PM IST

ಮುದ್ದೇಬಿಹಾಳ : ಪಟ್ಟಣದಲ್ಲಿ ನಾಡ ಹಬ್ಬ ರಾಜ್ಯೋತ್ಸವ ಪ್ರಯುಕ್ತ 100 ಮೀಟರ್ ಉದ್ದದ ಕನ್ನಡ ಬಾವುಟವನ್ನು ಮೆರವಣಿಗೆ ಮೂಲಕ ಪ್ರದರ್ಶನ ಮಾಡಲಾಯಿತು. ಪ್ರಜಾಶಕ್ತಿ ಸೇವಾ ಕೇಂದ್ರದ ಯುವಕರು ಈ ಬಾವುಟವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರದರ್ಶನ ನಡೆಸಿದರು.

ನೂರು ಮೀಟರ್ ಉದ್ದದ ನಾಡಧ್ವಜ ಮೆರವಣಿಗೆ

ಇನ್ನುಳಿದಂತೆ ಪಟ್ಟಣದ ಆಟೋ ಚಾಲಕರು,ವಿವಿಧ ಗೂಡ್ಸ್ ವಾಹನ ಚಾಲಕರು ತಮ್ಮ ವಾಹನಗಳ ಮೇಲೆ ಕನ್ನಡ ಬಾವುಟಗಳನ್ನು ಅಳವಡಿಸಿ ರಾಜ್ಯೋತ್ಸವದ ಮೆರಗು ಹೆಚ್ಚಿಸಿದರು.

ಪಟ್ಟಣದ ಶರಣು ಬೂದಿಹಾಳಮಠ ಫೌಂಡೇಶನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಸಹಯೋಗದಲ್ಲಿ ಸಾರಿಗೆ ಬಸ್‌ಗಳನ್ನು ಹೂವಿನಿಂದ ಅಲಂಕೃತಗೊಳಿಸಿ ಬೈಕ್ ರ‍್ಯಾಲಿ ನಡೆಸಲಾಯಿತು.

ಪಟ್ಟಣದ ಹುಡ್ಕೊ ಗೇಟ್‌ನಲ್ಲಿರುವ ಕಿತ್ತೂರ ಚೆನ್ನಮ್ಮ ಮಹಾದ್ವಾರದ ಬಳಿ ಬೈಕ್ ರ‍್ಯಾಲಿ ಹಾಗೂ ಕನ್ನಡಧ್ವಜಗಳಿಂದ ಅಲಂಕೃತ ಬಸ್‌ಗಳ ಮೆರವಣಿಗೆಗೆ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಚಾಲನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.