ಮುದ್ದೇಬಿಹಾಳ (ವಿಜಯಪುರ): ಸ್ಥಳೀಯ ಎಂಜಿವಿಸಿ ಮಹಾವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಸುಷ್ಮಿತಾ ಶೆಟ್ಟರ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕೊರೊನಾ ಹೋರಾಟಗಾರರು: ಸೇವೆ ಮತ್ತು ಸವಾಲುಗಳು ಎಂಬ ವಿಷಯದ ಕುರಿತಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎ.ಬಿ ಕುಲಕರ್ಣಿ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯ ಹೆಚ್ಚಳಕ್ಕಾಗಿ ನಮ್ಮ ಸಂಸ್ಥೆಯ ವತಿಯಿಂದ ಪ್ರೋತ್ಸಾಹ ರೂಪದಿಂದ ಬಹುಮಾನ ನಿಗದಿಪಡಿಸಲಾಗಿತ್ತು.
ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಒಳ್ಳೆಯ ರೀತಿಯಿಂದ ಸ್ಪರ್ಧೆಯನ್ನು ಕೊಟ್ಟಿದ್ದಾರೆ ಎಂದರು. ಪ್ರಥಮ ಬಹುಮಾನ ಪಡೆದ ಸುಷ್ಮಿತಾ ಶೆಟ್ಟರ್ ಅವರಿಗೆ 5 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. 2ನೇ ಸ್ಥಾನ ಸಿಎಸ್ಬಿ ಕಾಲೇಜು ರಾಮದುರ್ಗದ ಮಸ್ತಾನ್ ಮುಲ್ಲಾ ಪಾಲಾಗಿದೆ.
3ನೇ ಬಹುಮಾನವನ್ನು ಬಿವಿವಿ ಪದವಿ ವಿಜ್ಞಾನ ಮಹಾವಿದ್ಯಾಲಯ ಬಾಗಲಕೋಟೆಯ ಕಾವ್ಯ ಯಂಕಂಚಿ ಪಡೆದುಕೊಂಡಿದ್ದಾರೆ. ಬಾಗಲಕೋಟೆಯ ಸೌಭಾಗ್ಯ ಉಂಕಿ, ಸವದತ್ತಿಯ ರಕ್ಷಿತಾ ವಾಡೆಕರ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಈ ವೇಳೆ ನ್ಯಾಕ್ ಸಂಯೋಜಕ ಡಾ.ಬಿ.ಎ ಗೂಳಿ. ಎಸ್ ಎನ್ ಪೋಲೇಶಿ. ಎಚ್ ಜಿ.ಪಾಟೀಲ್. ಎಂ.ಐ ಬಿರಾದಾರ ರವೀಂದ್ರ ನಂದೆಪ್ಪನವರ, ಡಾ. ಪ್ರಕಾಶ ನರಗುಂದ ಇದ್ದರು.