ವಿಜಯಪುರ: ಉಡುಪಿ ಹಿಜಾಬ್ ವಿವಾದ ವಿಜಯಪುರಕ್ಕೂ ತಲುಪಿದೆ. ಹಿಜಾಬ್ ವಿರೋಧಿಸಿ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ.
ಕೇಸರಿ ಶಾಲು ಸಹಿತ ಆಗಮಿಸಿದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಮುಂದಾಗಿದ್ದರು. ಈ ವೇಳೆ, ಕಾಲೇಜು ಆಡಳಿತ ಮಂಡಳಿ ಗೇಟ್ ಬಂದ್ ಮಾಡಿದೆ. ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಎಚ್ಚೆತ್ತ ಆಡಳಿತ ಮಂಡಳಿ ಕಾಲೇಜಿನಲ್ಲಿ ಗೊಂದಲ ಸೃಷ್ಟಿಯಾಗದಿರಲಿ ಎಂದು ರಜೆ ಘೋಷಿಸಿದೆ. ಸ್ಥಳಕ್ಕೆ ಚಡಚಣ ಠಾಣೆ ಪೊಲೀಸರ ಭೇಟಿ, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಇದನ್ನೂ ಓದಿ:ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ!