ವಿಜಯಪುರ: ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಅನುಮಾನ ವ್ಯಕ್ತವಾಗಿದೆ.
ಫೆ. 24ರಂದು ಸೋಮವಾರ ಬೆಳಗ್ಗೆ 9.30ರಿಂದ 12.45ರವರೆಗೆ ನಡೆಯಬೇಕಿದ್ದ ವಿಜ್ಞಾನ ಪರೀಕ್ಷೆಯ 80 ಅಂಕಗಳ ವಿಜ್ಞಾನ ಪ್ರಶ್ನೆಪತ್ರಿಕೆಯ ಹಲೋ ಅಪ್ಲಿಕೇಷನ್ನಲ್ಲಿ ಲೀಕ್ ಆಗಿದೆ ಎನ್ನಲಾಗುತ್ತಿದೆ. ಹಲೋ ಆ್ಯಪ್ನಲ್ಲಿ ಹತ್ತಾರು ಮಂದಿ ಇದನ್ನು ಶೇರ್ ಮಾಡಿದ್ದಾರೆ.
ಎಷ್ಟೇ ಭದ್ರತೆ ಕೈಗೊಂಡಿದ್ದರೂ ಪ್ರಶ್ನೆಪತ್ರಿಕೆ ಹೇಗೆ ಬಹಿರಂಗಗೊಳ್ಳುತ್ತದೆ ಎಂಬುದು ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ.