ETV Bharat / state

ಪಿಎಫ್​ಐ ಬೆಳೆಯಲು ಸಿದ್ದರಾಮಯ್ಯ ತುಷ್ಟೀಕರಣದ ರಾಜಕಾರಣ ಕಾರಣ.. ಬೊಮ್ಮಾಯಿ - CM Basavaraja Bommayi

ಯಾರು ಭಾರತವನ್ನು ಎರಡು ದೇಶಗಳನ್ನಾಗಿ ಮಾಡಿ ಭಾರತ್ ತೋಡೋ ಮಾಡಿದ್ದರೋ ಅವರೇ ಇಂದು ಭಾರತ್ ಜೋಡೋ ಮಾಡುತ್ತಿದ್ದಾರೆ. ಇವತ್ತಿಗೂ ಆ ಗಾಯದ ಬರೆ ಯಾರೂ ಮರೆತಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

CM Basavaraja Bommayi
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Sep 30, 2022, 6:06 PM IST

Updated : Sep 30, 2022, 7:56 PM IST

ವಿಜಯಪುರ: ಯಾವ ಸಂಘಟನೆ ಕಾಂಗ್ರೆಸ್ ಶಾಸಕರ ಮೇಲೆ ಕೊಲೆ ಯತ್ನ ನಡೆಸಿತ್ತೋ ಅದೇ ಸಂಘಟನೆಯ ಪ್ರಕರಣವನ್ನೇ ಕಾಂಗ್ರೆಸ್ ಹಿಂಪಡೆದಿತ್ತು. ಇದಕ್ಕಿಂತ ತುಷ್ಟೀಕರಣದ ರಾಜಕಾರಣದ ಉದಾಹರಣೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಪರಿಣಾಮವಾಗಿಯೇ ಅವರು ಪಿಎಫ್​ಐ, ಕೆಎಫ್​ಡಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅದನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ತುಷ್ಟೀಕರಣ ರಾಜಕಾರಣದ ಫಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶಾಸಕ ಸಿ.ಎಂ. ಇಬ್ರಾಹಿಂ ಅವರ ಪಿಎಫ್​ಐ ನಿಷೇಧದ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಕೇವಲ ವಿಚ್ಛೇದನ ಹಾಗೂ ಮದುವೆ ಮಾಡಿಸುವುದರಲ್ಲಿ ಮಾತ್ರ ಪರಿಣಿತರು. ಇದು ಗಂಭೀರವಾದ ವಿಚಾರ. ಈ 5 ವರ್ಷಗಳ ಚಟುವಟಿಕೆಗಳನ್ನು ಗಮನಿಸಿ ಮುಂದಿನ ಕ್ರಮ ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದರು.

ಫ್ಲೆಕ್ಸ್ ಹರಿದಿಲ್ಲ: ಭಾರತ್ ಜೋಡೋ ಫ್ಲೆಕ್ಸ್​ಗಳನ್ನು ಕಾಂಗ್ರೆಸ್ ಪಕ್ಷದವರೇ ಹರಿದು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ನಮ್ಮ ಶಾಸಕರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಭಾರತ್ ಜೋಡೋ ಯಾತ್ರೆ ಆರಂಭವಾಗಿರುವುದು ತಿಳಿದಿದೆ. ಯಾರು ಭಾರತವನ್ನು ಎರಡು ದೇಶಗಳನ್ನಾಗಿ ಮಾಡಿ ಭಾರತ್ ತೋಡೋ ಮಾಡಿದ್ದರೋ ಅವರೇ ಇಂದು ಭಾರತ್ ಜೋಡೋ ಮಾಡುತ್ತಿದ್ದಾರೆ. ಇವತ್ತಿಗೂ ಆ ಗಾಯದ ಬರೆ ಯಾರೂ ಮರೆತಿಲ್ಲ. ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ, ಮಾಡಲಿ ಎಂದರು.

ದಸರಾ ನಂತರ ಜಂಟಿ ಪ್ರವಾಸ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ತಮ್ಮ ಜಂಟಿ ರಾಜ್ಯ ಪ್ರವಾಸ ದಸರಾ ಮುಗಿದ ಕೂಡಲೇ ಕೈಗೊಳ್ಳಲಾಗುವುದು ಎಂದರು.

ದಿ.ಉಮೇಶ್ ಕತ್ತಿ ನೆನಪು ಸದಾ ಹಸಿರು: ದಿವಂಗತ ಉಮೇಶ್ ಕತ್ತಿ ಅವರು ಮೂರೂವರೇ ದಶಕಗಳಿಂದ ಆತ್ಮೀಯ ಸ್ನೇಹಿತರು. ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ್ದೇನೆ. ಅವರ ನೆನಪು ನಮ್ಮ ಹೃದಯದಂಗಳದಲ್ಲಿ ಸದಾ ಹಸಿರಾಗುತ್ತದೆ. ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಸರ್ವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅವರ ಸ್ಮರಣಾರ್ಥ ಮೌನಾಚಾರಣೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ಅಲ್ಲಲ್ಲಿ ಹತ್ತೋದು ಇಳಿಯೋದೇ ಇವರ ಭಾರತ್ ಜೋಡೋ ಪಾದಯಾತ್ರೆ: ಸೋಮಣ್ಣ ವ್ಯಂಗ್ಯ

Last Updated : Sep 30, 2022, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.