ವಿಜಯಪುರ: ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ.
ಪಡನೂರ ಗ್ರಾಮದ ಮಲ್ಲು ಅವರಾದಿ ಎಂಬುವರು ತಮ್ಮ ಹೊಲದಲ್ಲಿ 35 ರಿಂದ 40 ಕ್ವಿಂಟಾಲ್ನಷ್ಟು ತೊಗರಿ ಬೆಳೆ ಸಂಗ್ರಹಿಸಿದ್ದರು. ಈ ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ನಂದಿಸಲು ನೀರು ಸಿಗಬಾರದೆಂದು ಹೊಲದಲ್ಲಿದ್ದ ಕೊಳವೆ ಬಾವಿ ಕೇಬಲ್ ಕತ್ತರಿಸಿ ಹೊತ್ತೊಯ್ದಿದ್ದಾರೆ.
ಓದಿ: ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!
ಹಳೆ ವೈಷಮ್ಯದ ಹಿನ್ನೆಲೆ, ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಗ್ರಾಮದಲ್ಲಿ ವ್ಯಕ್ತವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.