ETV Bharat / state

ವಿಜಯಪುರ: ಅಂಗಡಿಗಳಲ್ಲಿ ಸರಣಿಗಳ್ಳತನ, ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ವಿಜಯಪುರ ಅಪರಾಧ ಸುದ್ದಿ

ವಿಜಯಪುರದಲ್ಲಿ ಕಳ್ಳರು ಕೈಚಳಕ ತೋರಿದ್ದು, ಅನೇಕ ಅಂಗಡಿಗಳಲ್ಲಿ ಕಳ್ಳತನ ಎಸಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Vijayapura
ಸರಣಿಗಳ್ಳತನ
author img

By

Published : Mar 10, 2021, 11:01 AM IST

ವಿಜಯಪುರ: ಇಲ್ಲಿನ ಗಣೇಶನಗರದ ಸುತ್ತಮುತ್ತಲಿನ‌ ಚಿನ್ನದಂಗಡಿ, ಸಿಮೆಂಟ್ ಅಂಗಡಿ, ಕಿರಾಣಿ ಸ್ಟೋರ್​, ಹೇರ್​ ಕಟ್ಟಿಂಗ್ ಹಾಗೂ ಬೇಕರಿ ಅಂಗಡಿಗಳ ಶೆಟರ್ ಮುರಿದು ಖದೀಮರು ಸರಣಿಗಳ್ಳತನ ಎಸಗಿದ್ದಾರೆ.

ಅಂಗಡಿಯೊಳಗೆ ನುಗ್ಗಲು ದೊಡ್ಡ ರಾಡ್ ಮೂಲಕ ಶೆಟರ್ ಮುರಿದು ಕಳ್ಳತನ ಮಾಡಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಜಾಲಬೀಸಿದ್ದಾರೆ.

ಕಾಮಗಾರಿಯೇ ಕಂಟಕ: ಇಬ್ರಾಹಿಂಪುರ ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಜಲನಗರದಿಂದ ಗಣೇಶನಗರಕ್ಕೆ ಸಂಪರ್ಕ ಹೊಂದಿರುವ ರಸ್ತೆ ಕಳೆದ ನಾಲ್ಕು ತಿಂಗಳಿಂದ ಬಂದ್ ಆಗಿದೆ. ಈ ಹಿನ್ನೆಲೆಯಲ್ಲು ರಾತ್ರಿ ಯಾವುದೇ ವಾಹನವಾಗಲಿ, ಬೈಕ್​ಗಳು ಓಡಾಡುವುದಿಲ್ಲ. ರಾತ್ರಿ 10ಗಂಟೆಯಾದರೆ ಈ ರಸ್ತೆ ಸಂಪೂರ್ಣ ಸ್ತಬ್ಧವಾಗುವ ಕಾರಣ ಕಳ್ಳರಿಗೆ ಕಳ್ಳತನ ಮಾಡಲು ಅನುಕೂಲವಾದಂತಾಗಿದೆ.

ಸದ್ಯ ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.