ETV Bharat / state

ರಿಸಲ್ಟ್​​ ಬರುವ ಮುನ್ನವೇ ಸಾವು... ಅತ್ಯುತ್ತಮ ಅಂಕ ಗಳಿಸಿರುವ ಪಿಯು ವಿದ್ಯಾರ್ಥಿ! - ಪಿಯುಸಿ ಫಲಿತಾಂಶ

ಕೊನೆಯ ಇಂಗ್ಲಿಷ್ ಪರೀಕ್ಷೆ ಬರೆಯುವ ಮುನ್ನ ಅನಾರೋಗ್ಯದಿಂದ ರಕ್ಷಿತ್ ಅಂಗಡಿ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ಇದೀಗ ದ್ವಿತೀಯ ಪಿಯುಸಿ ರಿಸಲ್ಟ್ ಬಂದಿದ್ದು, ರಕ್ಷಿತ್ ಐದು ವಿಷಯಗಳಲ್ಲಿ ಶೇ. 90ರಷ್ಟು ಅಂಕ ಗಳಿಸಿದ್ದಾನೆ.

rakshith angadi
rakshith angadi
author img

By

Published : Jul 15, 2020, 1:32 PM IST

ವಿಜಯಪುರ: ದೈಹಿಕ ನ್ಯೂನತೆ ಮೆಟ್ಟಿ ನಿಂತು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡು ಅಕಾಲಿಕ ಮರಣ ಹೊಂದಿರುವ ಜಿಪಂ ಸದಸ್ಯೆಯೊಬ್ಬರ ಪುತ್ರ ರಕ್ಷಿತ್ ಅಂಗಡಿ ಎಂಬಾತ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಮತ್ತೊಮ್ಮೆ ತನ್ನ ಪ್ರತಿಭೆ ನೆನಪಿಸಿದ್ದಾನೆ.

rakshith angadi
ರಕ್ಷಿತ್ ಅಂಗಡಿ

ಕೊನೆಯ ಇಂಗ್ಲಿಷ್ ಪರೀಕ್ಷೆ ಬರೆಯುವ ಮುನ್ನ ಅನಾರೋಗ್ಯದಿಂದ ರಕ್ಷಿತ್ ಅಂಗಡಿ ಅಸುನೀಗಿದ್ದ. ಇದೀಗ ರಕ್ಷಿತ್ ಅಂಗಡಿ ದ್ವಿತೀಯ ಪಿಯುಸಿ ಪರೀಕ್ಷೆಯ ಐದು ವಿಷಯಗಳಲ್ಲಿ ಶೇ. 90ರಷ್ಟು ಅಂಕ ಗಳಿಸಿದ್ದಾನೆ. ಆದರೆ ಉತ್ತಮ ಅಂಕ ಗಳಿಸಿರುವ ರಕ್ಷಿತ್​ನೇ ಈಗಿಲ್ಲ.

ಕನ್ನಡದಲ್ಲಿ 90, ಭೌತಶಾಸ್ತ್ರದಲ್ಲಿ 90, ರಸಾಯನಶಾಸ್ತ್ರದಲ್ಲಿ 92, ಗಣಿತದಲ್ಲಿ 86, ಜೀವಶಾಸ್ತ್ರದಲ್ಲಿ 90 ಅಂಕ ಗಳಿಸಿದ್ದಾನೆ. ಕೊರೊನಾದಿಂದ ಇಂಗ್ಗಿಷ್ ಪರೀಕ್ಷೆ ಮುಂದೂಡಲಾಗಿತ್ತು. ನಂತರ ಪರೀಕ್ಷೆ ನಡೆಸುವ ಮುನ್ನವೇ ರಕ್ಷಿತ್ ಅಕಾಲಿಕವಾಗಿ ಸಾವನ್ನಪ್ಪಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.