ETV Bharat / state

ವಿಜಯಪುರ: ವೃಕ್ಷೋತ್ಥಾನ ಹೆರಿಟೇಜ್ ರನ್​ಗೆ ಸಿದ್ಧತೆ

ಬರದನಾಡು ವಿಜಯಪುರವನ್ನು ಮಲೆನಾಡನ್ನಾಗಿ ಮಾಡಲು ಹಾಗೂ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಕುರಿತು ಮತ್ತಷ್ಟು ಪ್ರಚಾರ ಪಡಿಸಲು ವೃಕ್ಷೋತ್ಥಾನ ಹೆರಿಟೇಜ್ ರನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijayapura
ವಿಜಯಪುರ
author img

By ETV Bharat Karnataka Team

Published : Dec 22, 2023, 11:22 AM IST

Updated : Dec 22, 2023, 12:25 PM IST

ವೃಕ್ಷೋತ್ಥಾನ ಹೆರಿಟೇಜ್ ರನ್​ಗೆ ಸಿದ್ಧತೆ

ವಿಜಯಪುರ: ಭೀಕರ ಬರ ಪೀಡಿತ ಜಿಲ್ಲೆ ಎಂದು ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲಿ ಗಿಡಗಳನ್ನು ಬೆಳೆಸಿ ಹಸರೀಕರಣ ಮಾಡಬೇಕು ಎಂಬ ಉದ್ದೇಶದಿಂದ ಕೋಟಿವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಕೋಟಿ ವೃಕ್ಷ ನೆಡುವ ಅಭಿಯಾನದ ಮೂಲಕ ಸಾಕಷ್ಟು ಬದಲಾವಣೆ ಕಂಡಿದೆ. ಇದನ್ನು ಮತ್ತಷ್ಟು ಪ್ರಚಾರ ಪಡಿಸುವ ಉದ್ದೇಶದಿಂದ ಈಗ ನಾಲ್ಕನೇ ಬಾರಿಗೆ ಮತ್ತೆ ಮ್ಯಾರಾಥಾನ್ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಸ್ವಲ್ಪ ಬದಲಾವಣೆ ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರ ಪಡಿಸುವ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ.

ಹೌದು, ಬರದನಾಡು ಎಂದಾಕ್ಷಣ ವಿಜಯಪುರ ಜಿಲ್ಲೆ ನೆನಪಿಗೆ ಬರೋದು ಸಹಜ. ಇಂತಹ ಬರದ ಭೂಮಿಯಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಲು ಸಚಿವ ಎಂ.ಬಿ.ಪಾಟೀಲ ಅವರು ಕೋಟಿ ವೃಕ್ಷ ಅಭಿಯಾನ ಆರಂಭಿಸಿದರು. ಈ ಅಭಿಯಾನದ ಮೂಲಕ ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಯಿತು‌. ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಈ ಯೋಜನೆಯಡಿ ಈಗ 90 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಬರದ ಭೂಮಿ ಸ್ವಲ್ಪ ಹಸಿರಾಗಿದ್ದು, ಅಲ್ಲಲ್ಲಿ ಗಂಗೆ ಹರಿದು ಅನ್ನದಾತರ ಬದುಕು ಬಂಗಾರವನ್ನಾಗಿಸಿದೆ. ಇನ್ನೂ ಬಾಕಿ ಉಳಿದ ಕ್ಷೇತ್ರದಲ್ಲೂ ಹಸಿರಾಗಿ ಗಂಗೆ ಹರಿಯಲಿ ಎಂಬ ದೃಷ್ಟಿಯಿಂದ ಮತ್ತೊಮ್ಮೆ ವೃಕ್ಷೋತ್ಥಾನ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ಅರಣ್ಯೀಕರಣ ಹೆಚ್ಚು ಮಾಡುವುದು ಈ ವೃಕ್ಷೋತ್ಥಾನ ಹೆರಿಟೇಜ್ ರನ್ ಉದ್ದೇಶವಾಗಿದೆ‌. ಪ್ರತಿಯೊಬ್ಬರು ತಮ್ಮ ಮನೆ, ಹೊಲ, ತೋಟ, ಗದ್ದೆಗಳ ಬದುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ. ಬೀಳು ಭೂಮಿಯಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಆರಂಭಗೊಂಡ ಕೋಟಿ ವೃಕ್ಷ ಅಭಿಯಾನದ ಭಾಗವಾಗಿ ನಡೆಯುತ್ತಿರುವ ವಿಜಯಪುರ ವೃಕ್ಷೋತ್ಥಾನ ಹೆರಿಟೇಜ್ ರನ್, ಬರುವ ರವಿವಾರ ಡಿಸೆಂಬರ್ 24 ರ ಬೆಳಗ್ಗೆ 6 ಗಂಟೆಯಿಂದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಳ್ಳುವುದು. ಈ ಬಾರಿ ನಮ್ಮನ್ನಗಲಿದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ನುಡಿ ನಮನ, ಸ್ಮಾರಕಗಳ ರಕ್ಷಣೆ ಅವುಗಳ ಪ್ರಚಾರ ಪಡಿಸುವ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ರನ್ ಆಯೋಜಿಸಲಾಗಿದೆ.

ಇದನ್ನೂ ಓದಿ : 2,000 ಸಾವಿರ ವರ್ಷದಷ್ಟು ಹಳೆಯ ದೊಡ್ಡ ಹುಣಸೆ ಮರಕ್ಕೆ ಮತ್ತೆ ಬಂತು ಜೀವಕಳೆ!

ಈ ಬಾರಿ 21 ಕಿಲೋಮೀಟರ್ ಓಟದಲ್ಲಿ 525, 10 ಕಿಲೊ ಮೀಟರ್ ಓಟದಲ್ಲಿ 250, 5 ಕಿಲೋಮೀಟರ್ ಓಟದಲ್ಲಿ 1200 ಹಾಗೂ 3.5 ಕಿಲೋಮೀಟರ್ ದಲ್ಲಿ 6000 ಓಟಗಾರರು ಭಾಗವಹಿಸುತ್ತಿದ್ದಾರೆ. ಇದು ವಿಜಯಪುರದಂತಹ ಪ್ರದೇಶದಲ್ಲಿ ದಾಖಲೆಯೇ ಸರಿ. ಈಗಾಗಲೇ ರಿಜಿಸ್ಟ್ರೇಷನ್ ಮುಕ್ತಾಯಗೊಂಡಿದೆ. ಒತ್ತಾಯದ ಮೇರೆಗೆ ಕಾರ್ಯಕ್ರಮದ ಹಿಂದಿನ ದಿನ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ರೆಜಿಸ್ಟ್ರೇಷನ್​ಗೆ ಅವಕಾಶ ಇದೆ. ಅದು ಕೆಲವೇ ಜನರಿಗೆ ಮಾತ್ರ. ಈ ಕುರಿತು ಈಗಾಗಲೇ ಸಂಘಟಕರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ‌. ಈಗಾಗಲೇ ಸುಮಾರು 10 ಸಾವಿರ ಜನ ರೆಜಿಸ್ಟ್ರೇಷನ್ ಮಾಡಿಕೊಂಡಿದ್ದು ಇನ್ನೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ. ಇದರ ಉದ್ದೇಶ ವಿಜಯಪುರ ನಗರದ ಪ್ರವಾಸಿ ತಾಣಗಳ ಅಭಿವೃದ್ಧಿ ಜೊತೆಗೆ ಈ ತಾಣಗಳ ಕುರಿತು ಜನರಿಗೆ ತಿಳಿಸುವುದು, ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿಯನ್ನು ಹೆಚ್ಚಳ ಮಾಡುವುದು, ಆರೊಗ್ಯದ ಕುರಿತು ಜಾಗೃತಿ ಮೂಡಿಸುವುದಾಗಿದೆ.

Last Updated : Dec 22, 2023, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.