ಮುದ್ದೇಬಿಹಾಳ : ತಾಲೂಕಿನ ನಾಲತವಾಡದಲ್ಲಿ ಮಾಸ್ಕ್ ಹಾಕದೆ ಬಂದ ಬೈಕ್ ಸವಾರನಿಗೆ ತೊಟ್ಟಿದ್ದ ಲುಂಗಿಯನ್ನೇ ಬಿಚ್ಚಿಸಿ ಮಾಸ್ಕ್ ರೀತಿ ಮುಖಕ್ಕೆ ಕಟ್ಟಿಸಿದ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ.
ತಾಲೂಕಿನ ನಾಲತವಾಡದ ನಾರಾಯಣಪುರ ರಸ್ತೆಯಲ್ಲಿ ಬರುವ ಪೆಟ್ರೋಲ್ ಪಂಪ್ ಹತ್ತಿರ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮಾಸ್ಕ್ ಹಾಕದೆ ಬಂದ ಸವಾರನನ್ನು ತಡೆದು ನಿಲ್ಲಿಸಿ ಅವರು ತೊಟ್ಟಿದ್ದ ಲುಂಗಿಯನ್ನೇ ಮಾಸ್ಕ್ ರೀತಿಯಲ್ಲಿ ಕಟ್ಟಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲೂ ಸಹ ಜನ ಮುಂದೆ ಬಂದಿಲ್ಲ. ಇದರಿಂದ ತರಕಾರಿ, ಹಣ್ಣು ಇತ್ಯಾದಿ ವಸ್ತುಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಜನಸಂಚಾರ ಇಲ್ಲದ್ದರಿಂದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು.
ಓದಿ: ಸೋಂಕಿನಿಂದ ಮೃತಪಟ್ಟ ತಾಯಿ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಯವಕ..